ಮದುವೆ ಸಮಾರಂಭದ ಮನೆಯಲ್ಲಿ ಗುಂಡು ಹಾರಿಸಿದ ಮಾಜಿ ಸೈನಿಕ

ಹೊಸದಿಗಂತ ವರದಿ, ಹುಕ್ಕೇರಿ:

ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಮದುವೆ ಸಮಾರಂಭದಲ್ಲಿ ಮಾಜಿ ಸೈನಿಕರೊಬ್ಬರು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ನಡೆದಿದ್ದು ಈಗಾಗಲೇ ಹುಕ್ಕೇರಿ ಪೋಲಿಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
=ಎಲಿಮನ್ನೋಳಿ ಗ್ರಾಮದ ಆಯಾಜ ಮಲ್ಲಿಕ ತಹಸಿಲ್ದಾರ್ ಎಂಬುವವರ ಮದುವೆ ಸಮಾರಂಭದಲ್ಲಿ ಈಘಟನೆ ನಡೆದಿದೆ.ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮಾಜಿ ಸೈನಿಕ ರಫೀಕಸಾಹೆಬ್ ತಹಸಿಲ್ದಾರ ಎಂಬಾತ ತನ್ನ ಪೀಸ್ತೂಲಿನಿಂದ ಐದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಹುಚ್ಚಾಟ ಪ್ರದರ್ಶನ ಮಾಡಿದ್ದಾನೆ. ಇನ್ನೂ ಗನ್ ಲೈಸನ್ಸ್ ನಿಯಮಗಳನ್ನು ಉಲ್ಲಂಘನೆ ಮಾಡಿದ ಹಿನ್ನೆಲೆ ಈಗಾಗಲೇ ಸ್ವಯಂ ಪ್ರಕರಣ ದಾಖಲಿಸಿಕೊಂಡ ಹುಕ್ಕೇರಿ ಪೋಲಿಸರು ಮಹಮ್ಮದ ರಫೀಕ್ ತಹಸಿಲ್ದಾರ್ ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!