ಪಾಕ್​ ಉದ್ದೇಶಿಸಿ ಇಮ್ರಾನ್ ಖಾನ್​ ಭಾಷಣ: ಇಂದೇ ಪ್ರಧಾನಿ ಪಟ್ಟಕ್ಕೆ ರಾಜೀನಾಮೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಪಾಕ್ ಪ್ರಧಾನಿ ಪಟ್ಟದಿಂದ ಇಮ್ರಾನ್ ಖಾನ್​ ಇಳಿಯುವುದು ಬಹುತೇಕ ಖಚಿತವಾಗಿದ್ದು,ಮುತ್ತಾಹಿದ್​ ಖ್ವಾಮಿ ಮೂಮೆಂಟ್ (MQM) ಪಕ್ಷದ ಸಚಿವರು ರಾಜೀನಾಮೆ ನೀಡಿದ ಬೆನ್ನಲ್ಲೇ ಇಮ್ರಾನ್ ಖಾನ್ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದು,ಬಳಿಕ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ಗೃಹಸಚಿವ ಶೇಖ್ ರಶೀದ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಮ್ರಾನ್ ಖಾನ್ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಇತ್ತ ಪಾಕಿಸ್ತಾನ್ ಪೀಪಲ್ ಪಾರ್ಟಿ (ಪಿಪಿಪಿ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ನೇತೃತ್ವದ ಪ್ರತಿಪಕ್ಷಗಳೊಂದಿಗೆ ತಮ್ಮ ಪಕ್ಷವು ಒಪ್ಪಂದವನ್ನು ಅಂತಿಮಗೊಳಿಸಿದೆ ಎಂದು ಎಂಕ್ಯೂಎಂ-ಪಿ ಹಿರಿಯ ನಾಯಕ ಫೈಸಲ್ ಸಬ್ಜ್ವಾರಿ ಬುಧವಾರ ಟ್ವೀಟ್ ಮಾಡಿದ್ದು, ಈ ಮೂಲಕ ಇಮ್ರಾನ್ ಖಾನ್ ನ ಪಿಟಿಐ ಪಕ್ಷದಿಂದ ಮತ್ತೊಂದು ಪಕ್ಷ ಹೊರಬಂದಿದೆ. ಇದರಿಂದ ಇಮ್ರಾನ್ ಖಾನ್​ ಇಳಿಯುವುದು ಬಹುತೇಕ ಖಚಿತವಾಗಿದೆ.
ಇನ್ನು ಇಮ್ರಾನ್ ಖಾನ್ ಬುಧವಾರ ಫೆಡರಲ್ ಕ್ಯಾಬಿನೆಟ್‌ನ ವಿಶೇಷ ಅಧಿವೇಶನವನ್ನು ಕರೆದಿದ್ದು, ಈ ಸಭೆಯ ಅಧ್ಯಕ್ಷತೆಯನ್ನು ಸ್ವತಃ ಇಮ್ರಾನ್ ಖಾನ್ ವಹಿಸಿಕೊಳ್ಳಲಿದ್ದಾರೆ ಎಂದು ರೇಡಿಯೋ ಪಾಕಿಸ್ತಾನ ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!