Friday, February 3, 2023

Latest Posts

ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಂಚರಿಸಲಿವೆ ಇ-ಬೈಕ್ ಟ್ಯಾಕ್ಸಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ಮುಂದೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇ-ಬೈಕ್ ಟ್ಯಾಕ್ಸಿ ಸೇವೆ ಲಭ್ಯವಾಗಲಿದೆ.
ಹೌದು, ಇ-ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು ಶೀಘ್ರವೇ ಟ್ಯಾಕ್ಸಿಗಳು ರಸ್ತೆಗಿಳಿಯಲಿವೆ.

ವಿಕೆಡ್ ರೈಡ್, ಬೌನ್ಸ್ ಖಾಸಗಿ ಸಂಸ್ಥೆಗಳಿಗೆ ಸಾರಿಗೆ ಇಲಾಖೆ ಪರವಾನಗಿ ನೀಡಿವೆ. ಇ-ಬೈಕ್ ಟ್ಯಾಕ್ಸಿಗಳಿಗೆ ಮೊದಲ ಐದು ಕಿಲೋಮೀಟರ್‌ಗೆ 25  ರೂಪಾಯಿ ನಿಗದಿ ಮಾಡಲಾಗಿದೆ. ತದನಂತರ 10 ಕಿಮೀ ಪ್ರಯಾಣಕ್ಕೆ 50 ರೂಪಾಯಿ ದರ ವಿಧಿಸಬೇಕಿದೆ.  ಸದ್ಯಕ್ಕೆ 100 ಇ-ಬೈಕ್ ಟ್ಯಾಕ್ಸಿ ನಿರ್ವಹಣೆಗೆ ಅನುಮತಿ ದೊರಕಿದ್ದು, ಮುಂದಿನ ಐದು ವರ್ಷದ ವರೆಗೆ ಪರವಾನಗಿ ಇರಲಿದೆ. ಸಾರ್ವಜನಿಕರಿಗೆ ಮೆಟ್ರೊಗೆ ತೆರಳಲು ಇ-ಬೈಕ್ ಅತಿ ಸುಲಭವಾದ ಆಯ್ಕೆಯಾಗಲಿದೆ.

15 ವರ್ಷ ದಾಟಿದ ಯಾರಾದರೂ ಇ-ಬೈಕ್ ಬಾಡಿಗೆ ಪಡೆಯುವುದು, ಚಾಲಕ ಹಾಗೂ ಹಿಂಬದಿ ಸವಾರನಿಗೆ ಸೂಚಿಸಿದ ಬಣ್ಣದ ಹೆಲ್ಮೆಟ್ ಕಡ್ಡಾಯವಾಗಿದೆ. ಸರ್ಕಾರದ ಈ ನಡೆಗೆ ಆಟೋ ಚಾಲಕರು ಬೇಸತ್ತಿದ್ದು, ತಮ್ಮ ದುಡಿಮೆಗೆ ಇದರಿಂದ ಅನ್ಯಾಯವಾಗುತ್ತದೆ ಎನ್ನುತ್ತಿದ್ದಾರೆ. ಬೆಂಗಳೂರಿನಲ್ಲಿ ಡಿ.29 ಕ್ಕೆ ಆಟೋ ಚಾಲಕರು ಭಾರೀ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!