Sunday, February 5, 2023

Latest Posts

ಭಾರತ- ಪಾಕ್ ನಡುವೆ ‌ಮಾತಿನ ಯುದ್ಧವಲ್ಲ, ರಚನಾತ್ಮಕ ಮಾತುಕತೆ ಬಯಸುತ್ತೇವೆ: ಅಮೆರಿಕ ಉನ್ನತ ಅಧಿಕಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರತ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕ ಬಹುಮುಖಿ ಸಂಬಂಧಗಳನ್ನು ಹಂಚಿಕೊಂಡಿದೆ. ಈ ದೇಶಗಳ ನಡುವೆ ನಾವು ʼಮಾತಿನ ಯುದ್ಧʼ ವನ್ನು ನೋಡಲು ಬಯಸುವುದಿಲ್ಲ. ಜನರ ಒಳಿತಿಗಾಗಿ ಉಭಯ ರಾಷ್ಟ್ರಗಳ ನಡುವೆ ರಚನಾತ್ಮಕ ಸಂಭಾಷಣೆಯನ್ನು ನೋಡಲು ಬಯಸುತ್ತೇವೆ ಎಂದು ಯುಎಸ್ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಾಶ್ಮೀರ ಸಮಸ್ಯೆ ಮತ್ತು ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಆಗಾಗ್ಗೆ ಹದಗೆಡುತ್ತವೆ. ನ್ಯೂಯಾರ್ಕ್‌ನಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಭಾರತದ ಆಕ್ರೋಶಕ್ಕೆ ಕಾರಣವಾಗಿತ್ತು.
ನಾವು ಎರಡೂ ದೇಶಗಳೊಂದಿಗೆ ಪಾಲುದಾರಿಕೆ ಹೊಂದಿದ್ದೇವೆ. ಆದ್ದರಿಂದ ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತಿನ ಯುದ್ಧವನ್ನು ನೋಡಲು ಬಯಸುವುದಿಲ್ಲ. ಭಾರತ ಮತ್ತು ಪಾಕಿಸ್ತಾನದ ನಡುವೆ ರಚನಾತ್ಮಕ ಮಾತುಕತೆಯನ್ನು ನೋಡಲು ನಾವು ಬಯಸುತ್ತೇವೆ. ಅದು ಪಾಕಿಸ್ತಾನಿ ಮತ್ತು ಭಾರತೀಯ ಜನರ ಒಳಿತಿಗಾಗಿ ಎಂದು ನಾವು ಭಾವಿಸುತ್ತೇವೆ. ದ್ವಿಪಕ್ಷೀಯವಾಗಿ ನಾವು ಒಟ್ಟಾಗಿ ಮಾಡಬಹುದಾದ ಬಹಳಷ್ಟು ಕೆಲಸಗಳಿವೆ, ”ಎಂದು ಯುಎಸ್ ಸ್ಟೇಟ್ ಡಿಪಾರ್ಟ್‌ಮೆಂಟ್ ವಕ್ತಾರ ನೆಡ್ ಪ್ರೈಸ್ ಪ್ರೈಸ್ ಹೇಳಿದ್ದಾರೆ.
“ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಹರಿಸಬೇಕಾದ ಹಲವು ಸಮಸ್ಯೆಗಳಿವೆ. ಎರಡೂ ರಾಷ್ಟ್ರಗಳಿಗೂ ಪಾಲುದಾರನಾಗಿ ಸಹಾಯ ಮಾಡಲು ಯುನೈಟೆಡ್ ಸ್ಟೇಟ್ಸ್ ಸಿದ್ಧವಾಗಿದೆ, ”ಎಂದು ಅವರು ಪ್ರತಿಪಾದಿಸಿದರು.
ಭಾರತವು ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಂಡ ನಂತರ ಮತ್ತು ಆಗಸ್ಟ್ 5, 2019 ರಂದು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!