ಆರ್ಥಿಕ ಬಿಕ್ಕಟ್ಟಿನಲ್ಲಿ ಇ ಕಾಮರ್ಸ್ ದೈತ್ಯ ಅಮೇಜಾನ್: 18 ಸಾವಿರ ಉದ್ಯೋಗಿಗಳು ವಜಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಆರ್ಥಿಕ ಅನಿಶ್ಚಿತತೆಗಳ ಕಾರಣದಿಂದಾಗಿ ಇ-ಕಾಮರ್ಸ್‌ ದೈತ್ಯ ಅಮೇಜಾನ್‌ 18 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಹೇಳಿದೆ. ಈ ಹಿಂದೆ ನವೆಂಬರ್‌ ನಲ್ಲಿ ಒಟ್ಟಾರೆ 10 ಸಾವಿರ ಉದ್ಯೋಗಿಗಳನ್ನು ವಜಾ ಗೊಳಿಸುವುದಾಗಿ ಅಮೇಜಾನ್‌ ಹೇಳಿತ್ತು. ಆದರೆ ಪ್ರಸ್ತುತ ಆರ್ಥಿಕ ಅನಿಶ್ಚಿತತೆಗಳ ಕಾರಣ ನೀಡಿ ವಜಾಗೊಳಿಸುವಿಕೆಯನ್ನು ಹೆಚ್ಚಿಸಿರುವುದಾಗಿ ಹೇಳಿದೆ.

ಅಲ್ಲದೇ ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ವಿಸ್ತರಣೆಯನ್ನುಗಮನಿಸಿ ಹೆಚ್ಚಿನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿತ್ತು. ಆದರೆ ಈಗ ವಜಾಗೊಳಿಸುವಿಕೆ ಅನಿವಾರ್ಯ ಎಂದು ಕಂಪನಿ ಹೇಳಿದೆ. ʼಇದು ಉದ್ಯೋಗಿಗಳ ಪಾಲಿಗೆ ಕಷ್ಟವೆಂದು ನಮಗೆ ತಿಳಿದಿದೆ. ನಾವದನ್ನು ಲಘುವಾಗಿ ಸ್ವೀಕರಿಸುವುದಿಲ್ಲʼ ಎಂದು ಸಿಇಒ ಆಂಡಿ ಜಾಸ್ಸಿ ತಮ್ಮ ಸಿಬ್ಬಂದಿಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದು ವಜಾಗೊಳಿಸುವಿಕೆಯಿಂದ ಬಾಧಿತರಾಗುವವರಿಗೆ ಬೇರ್ಪಡಿಕೆ ಪಾವತಿ, ಆರೋಗ್ಯ ವಿಮೆ ಪ್ರಯೋಜನಗಳು ಮತ್ತು ಬಾಹ್ಯ ಉದ್ಯೋಗ ನಿಯೋಜನೆಗೆ ಬೆಂಬಲವನ್ನು ಒಳಗೊಂಡಿರುವ ಪ್ಯಾಕೇಜ್‌ಗಳನ್ನು ಒದಗಿಸುವುದಾಗಿ ಅವರು ಘೋಷಿಸಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ಈ ಹಿಂದೆ ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನ ಬೇಡಿಕೆಗಳನ್ನು ಪೂರೈಸಲು ಅಮೇಜಾನ್‌ 2020 ರಿಂದ 2022ರ ನಡುವೆ ಹೆಚ್ಚಿನ ನೇಮಕಾತಿ ನಡೆಸಿ ತನ್ನ ಒಟ್ಟಾರೆ ಉದ್ಯೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿತ್ತು. ಗುಂಪು ಸೆಪ್ಟೆಂಬರ್ ಅಂತ್ಯದ ವೇಳೆಗೆ ವಿಶ್ವಾದ್ಯಂತ 1.54 ಮಿಲಿಯನ್ ಉದ್ಯೋಗಿಗಳನ್ನು ಹೊಂದಿತ್ತು. ಆದರೆಇದೀಗ ಆರ್ಥಿಕ ಬಿಕ್ಕಟ್ಟಿನಿದಾಗಿ 18 ಸಾವಿರ ಉದ್ಯೋಗ ಕಡಿತಕ್ಕೆ ಅಮೇಜಾನ್‌ ಮುಂದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!