ಅಪಾಯದಲ್ಲಿ ಭೂಮಿ: ಮಾನವ ಕುಲಕ್ಕೆ ಎಚ್ಚರಿಕೆಯ ಕರೆಗಂಟೆ ಬಾರಿಸುತ್ತಿದೆ ‘ಬಿಸಿ’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೂಮಿಯ ಮೇಲ್ಮೈ ತಾಪಮಾನ ಅಪಾಯಕಾರಿ ರೀತಿಯಲ್ಲಿ ಏರಿಕೆಯಾಗುತ್ತಿದ್ದು, ಇದು ಮಾನವ ಕುಲಕ್ಕೆ ಅಪಾಯದ ಕರೆಗಂಟೆ ಎಂದು ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ ನೀಡಿದೆ.

ತಾಪಮಾನ ನಿಯಂತ್ರಣಕ್ಕಾಗಿ ವಿಶ್ವದ ರಾಷ್ಟ್ರಗಳು ನಡೆಸುತ್ತಿರುವ ಯತ್ನಗಳು ಏನೇನೂ ಸಾಕಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸಂಸ್ಥೆ, 2024ನೇ ಇಸವಿ ತಾಪಮಾನ ಏರಿಕೆಯಲ್ಲಿ ಹೊಸ ದಾಖಲೆ ಸೃಷ್ಟಿಸುವ ಹಾದಿಯಲ್ಲಿದೆ ಎಂದಿದೆ.

ಈ ಬಗ್ಗೆ ಮಾತನಾಡಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಯಂಟೊನಿಯೊ ಗುಟೆರಸ್, ಭೂಮಿಯ ಮೇಲ್ಮೈ ಹಾಗೂ ಜಲರಾಶಿಯಲ್ಲಿ ಕೂಡಾ ತಾಪಮಾನ ಅಪಾಯಕಾರಿ ಮಟ್ಟದಲ್ಲಿ ಹೆಚ್ಚಳವಾಗಿದೆ, ನೀರ್ಗಲ್ಲುಗಳು ಕರಗುತ್ತಿವೆ, 2023ರ ಮಾರ್ಚ್‌ನಿಂದ ಈ ವರ್ಷದ ಫೆಬ್ರವರಿ ವರೆಗಿನ ಅವಧಿಯಲ್ಲಿ ಜಾಗತಿಕ ತಾಪಮಾನದಲ್ಲಿನ ಹೆಚ್ಚಳವು 1.5 ಡಿಗ್ರಿ ಸೆಲ್ಸಿಯಸ್ ಮಿತಿಯನ್ನು ಮೀರಿದ್ದು, 1.56 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!