Tuesday, August 16, 2022

Latest Posts

ಮರಳು ಭೂಮಿಯಲ್ಲಿ ಮತ್ತೆ ನಡುಗಿದ ಭೂಮಿ: ಮೂರು ಮಂದಿ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಇರಾನ್‌ನಲ್ಲಿ ಮತ್ತೆ ಭೂಮಿ ಕಂಪಿಸಿದ್ದು, ಘಟನೆಯಲ್ಲಿ ಮೂರು ಮಂದಿ ಸಾವನ್ನಪ್ಪಿದ್ದಾರೆ.
ಶುಕ್ರವಾರ ತಡರಾತ್ರಿ ಈ ಪ್ರಬಲ ಭೂಕಂಪ ಸಂಭವಿಸಿದೆ. ಇದೇ ಸಂದರ್ಭ ಯುಎಇಯ ಏಳು ದೇಶಗಳಲ್ಲಿಯೂ ಕಂಪನದ ಅನುಭವ ಉಂಟಾಗಿದೆ ಎನ್ನಲಾಗಿದೆ.
ಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.3 ದಾಖಲಾಗಿದೆ. ಸುಮಾರು 10 ಕಿಲೋ ಮೀಟರ್ ಆಳದಲ್ಲಿ ಕಂಪನದ ಕೇಂದ್ರಬಿಂದು ಗುರುತಿಸಲಾಗಿದೆ.
ಮಾಹಿತಿಗಳ ಪ್ರಕಾರ ಇರಾನ್‌ನಲ್ಲಿ ಭೂಮಿ ಕಂಪಿಸಿದ ಸ್ವಲ್ಪ ಸಮಯದ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಏಳು ದೇಶಗಳಲ್ಲಿ ಕಂಪನ ಅನುಭವವಾಗಿದೆ. ಎರಡು ಬಾರಿ ಭೂಮಿ ಕಂಪಿಸಿದ್ದ, ಮೊದಲಿಗೆ 2.42 ಹಾಗೂ ನಂತರ 3.13ಕ್ಕೆ ಕಂಪನದ ಅನುಭವವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss