ಚಿಕ್ಕಬಳ್ಳಾಪುರದಲ್ಲಿ ಮತ್ತೆ ನಡುಗಿದ ಭೂಮಿ, ಭಾರೀ ಶಬ್ಧಕ್ಕೆ ಭಯಭೀತರಾದ ಜನ

ಹೊಸದಿಗಂತ ವರದಿ ಚಿಕ್ಕಬಳ್ಳಾಪುರ:

ಪದೇ ಪದೇ ಜಿಲ್ಲೆಯಲ್ಲಿ ಭೂಮು ನಡುಗುವ ಅನುಭವವಾಗುತ್ತಿದೆ. ಭೂಮಿಯ ಒಳಗಿಂದ ಭಾರೀ ಶಬ್ಧ ಕೇಳಿಬಂದ ಹಿನ್ನೆಲೆಯಲ್ಲಿ ಜನ ಮನೆಯಿಂದ ಹೊರಗೆ ಓಡಿ ಬಂದಿರುವ ಘಟನೆ ಬಾಗೇಪಲ್ಲಿ ತಾಲೂಕಿನಲ್ಲಿ ನಡೆದಿದೆ. ಇತ್ತೀಚಿಗೆ ಚಿಕ್ಕಬಳ್ಳಾಪುರ ಹಾಗೂ ಗುಡಿಬಂಡೆ ತಾಲೂಕಿನ ಹಲವು ಗ್ರಾಮ ಗ್ರಾಮಗಳಲ್ಲಿ ಭೂಕಂಪನದ ಸದ್ದು ಕೇಳಿ ಬಂದಿತ್ತು, ಆದರೆ ಈಗ ಬಾಗೇಪಲ್ಲಿ ತಾಲೂಕಿನ ಹಲವು ಗ್ರಾಮಗಳಲ್ಲಿ ಇದೇ ಶಬ್ದ ಕೇಳಿ ಬಂದಿದ್ದು ಜನರು ತಲೆ ಕಡೆಸಿಕೊಳ್ಳುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಏನು ಎಂಬುದನ್ನು ಅಧಿಕಾರಿಗಳು ಹುಡುಕುತ್ತಿದ್ದಾರೆ.

ಬಾಗೇಪಲ್ಲಿ ತಾಲೂಕಿನಲ್ಲಿ ಕಂಪನ

ಯಲ್ಲಂಪಲ್ಲಿ, ದೇವರಗುಡಿಪಲ್ಲಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೂಮಿ ಶೇಕ್​ ಆಗಿದ್ದು, ಪೆದ್ದ ತುಮಕೇಪಲ್ಲಿ, ಲಘುಮದ್ದೇಪಲ್ಲಿ, ಗುರಾಲದಿನ್ನೆ ಶಂಖವಾರಂಪಲ್ಲಿ, ಮದ್ದಲಖಾನೆ, ನೀರಗಂಟಿಪಲ್ಲಿ, ಟೆಂಕಮಾಕಲಪಲ್ಲಿ ಸೇರಿ ಹಲವು ಹಳ್ಳಿಗಳಲ್ಲಿ ಭೂಮಿ ಕಂಪನವಾಗಿದೆ.

ರಾತ್ರಿ 9.30ರಿಂದ 9.45ರ ನಡುವೆ ಎರಡು ಬಾರಿ ಶಬ್ಧ ಕೇಳಿ ಆತಂಕ ಶುರುವಾಗಿದ್ದು, ಶಬ್ಧ ಕೇಳಿದ ಜನರು ಮನೆಯಿಂದ ಹೊರಬಂದಿದ್ದಾರೆ. ಕಳೆದ ಮೂರ್ನಾಲ್ಕು ವರ್ಷದಿಂದ ಪದೇಪದೇ ಭೂಕಂಪದ ಅನುಭವವಾಗುತ್ತಲೇ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!