September 29, 2026
Tuesday, September 29, 2026
spot_img

FOOD | ಬೆಳಗಿನ ತಿಂಡಿ ಬಗ್ಗೆ ಚಿಂತೆ ಮಾಡ್ಬೇಡಿ, ಸುಲಭವಾದ ತೆಂಗಿನಕಾಯಿ ಅನ್ನ ಟ್ರೈ ಮಾಡಿ

ತೆಂಗಿನಕಾಯಿ ಅನ್ನ ಅಥವಾ ಕಾಯಿ ಅನ್ನವು ಕರ್ನಾಟಕದ ಸಾಂಪ್ರದಾಯಿಕ ಅಡುಗೆಯಾಗಳಲ್ಲಿ ಒಂದಾಗಿದೆ. ಇದು ಅತ್ಯಂತ ರುಚಿಕರವಾಗಿದ್ದು, ಇದನ್ನು 10-15 ನಿಮಿಷಗಳಲ್ಲಿ ಸುಲಭವಾಗಿ ತಯಾರಿಸಬಹುದು.
ಬೇಕಾಗುವ ಸಾಮಗ್ರಿಗಳು:
ಅನ್ನ
ತೆಂಗಿನಕಾಯಿ
ತೆಂಗಿನ ಎಣ್ಣೆ ಅಥವಾ ತುಪ್ಪ
ಸಾಸಿವೆ
ಉದ್ದಿನ ಬೇಳೆ ಮತ್ತು ಕಡಲೆ ಬೇಳೆ
ಗೋಡಂಬಿ, ಶೇಂಗಾ
ಹಸಿಮೆಣಸಿನಕಾಯಿ
ಒಣ ಮೆಣಸಿನಕಾಯಿ
ಕರಿಬೇವು
ಶುಂಠಿ
ಇಂಗು
ಉಪ್ಪು

ಮಾಡುವ ವಿಧಾನ
ಮೊದಲು ಅನ್ನವನ್ನು ಮಾಡಿ ಅದನ್ನು ತಣ್ಣಗಾಗಲು ಬಿಡಬೇಕು. ಅನ್ನ ಉದುರಾಗಿ ಇರುವುದು ಮುಖ್ಯವಾಗಿದೆ. ಬಳಿಕ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ ಸಿಡಿಸಿ. ನಂತರ ಉದ್ದಿನ ಬೇಳೆ, ಕಡಲೆ ಬೇಳೆ ಮತ್ತು ಗೋಡಂಬಿ, ಶೇಂಗಾ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಬೇಕು. ನಂತರ ಶುಂಠಿ, ಹಸಿಮೆಣಸಿನಕಾಯಿ, ಒಣ ಮೆಣಸಿನಕಾಯಿ, ಕರಿಬೇವು ಮತ್ತು ಇಂಗು ಸೇರಿಸಿ ಸ್ವಲ್ಪ ಬಾಡಿಸಿಕೊಂಡು, ತುರಿದ ತೆಂಗಿನಕಾಯಿಯನ್ನು ಹಾಕಿ ಸಣ್ಣ ಉರಿಯಲ್ಲಿ ಹಸಿ ವಾಸನೆ ಹೋಗುವವರೆಗು ಹುರಿಯಬೇಕು. ಬಳಿಕ ಕೊನೆಯದಾಗಿ ಅನ್ನ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಬೆರೆಸಿ, ಬಾಣಲೆಯ ಮೇಲೆ ಮುಚ್ಚಳ ಮುಚ್ಚಿ 2 ನಿಮಿಷ ಸಣ್ಣ ಉರಿಯಲ್ಲಿ ಬಿಸಿ ಮಾಡಿದರೆ. ರುಚಿಯಾದ ತೆಂಗಿನಕಾಯಿ ಅನ್ನ ಸಿದ್ಧವಾಗುತ್ತದೆ.

Must Read