ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಟೊಮ್ಯಾಟೊ
ಬೆಳ್ಳುಳ್ಳಿ
ಶುಂಠಿ
ಖಾರದಪುಡಿ
ಗರಂ ಮಸಾಲಾ
ಅರಿಶಿಣ
ಮೊಟ್ಟೆ
ಮಾಡುವ ವಿಧಾನ
ಮೊದಲು ಮೊಟ್ಟೆ ಬೇಯಿಸಿ ಸಿಪ್ಪೆ ತೆಗೆದು ಎತ್ತಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆ ಹಸಿಮೆಣಸು ಹಾಕಿ.
ನಂತರ ಈರುಳ್ಳಿ ಹಾಕಿ,
ನಂತರ ಸಣ್ಣಗೆ ಹೆಚ್ಚಿದ ಶುಂಠಿ, ಬೆಳ್ಳುಳ್ಳಿ ಹಾಕಿ.
ನಂತರ ಇದಕ್ಕೆ ಟೊಮ್ಯಾಟೊ ಹಾಕಿ.
ಅರಿಶಿಣ, ಖಾರದಪುಡಿ, ಗರಂ ಮಸಾಲಾ ಹಾಕಿ.
ಸ್ವಲ್ಪ ನೀರು ಹಾಕಿ ಗ್ರೇವಿ ಹದಕ್ಕೆ ಬರಲು ಬಿಡಿ.
ನಂತರ ಇದಕ್ಕೆ ಉಪ್ಪು ಹಾಕಿ, ಬೇಯಿಸಿದ ಮೊಟ್ಟೆ ಹಾಕಿದರೆ ಮೊಟ್ಟೆ ಮಸಾಲಾ ರೆಡಿ