ಈ ದೊಡ್ಡ ಸಮೋಸ ಒಂದೇ ಸಲ ತಿಂದು 51  ಸಾವಿರ ಬಹುಮಾನ ಪಡೆಯಿರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಮೋಸಾ ಎಷ್ಟು ತಿಂತೀರಾ? ಎರಡು ಅಥವಾ ಮೂರು , ಕಾಂಪಿಟೇಷನ್ ಇದೆ ಎಂದರೆ ಹತ್ತು ತಿನ್ನಬಹುದು.. ಆದರೆ ಇಲ್ಲಿ ನೀವು ತಿನ್ನಬೇಕಿರೋದು ಒಂದೇ ಒಂದು ಸಮೋಸ, ಇದನ್ನು ತಿಂದರೆ ಬರೋಬ್ಬರಿ 51 ಸಾವಿರ ರೂಪಾಯಿ ನಿಮ್ಮದಾಗುತ್ತದೆ.

ಎಂಟು ಕೆ.ಜಿ ಇರುವ ಸಮೋಸಾವನ್ನು ತಿಂದರೆ ಮೀರತ್‌ನಲ್ಲಿರುವ ಕೌಶಲ್ ಸ್ವೀಟ್ಸ್ ಓನರ್ ನಿಮಗೆ 51 ಸಾವಿರ ರೂ. ನೀಡುತ್ತಾರೆ.

ನಿಧಾನಕ್ಕೆ ದಿನವೆಲ್ಲಾ ಕುಳಿತು ಸಮೋಸಾ ತಿನ್ನಬಹುದು ಅಂದುಕೊಳ್ಳಬೇಡಿ, ಇದನ್ನು ತಿನ್ನೋಕೆ ಇರೋದು ಅರ್ಧ ಗಂಟೆ ಮಾತ್ರ. ಪ್ರಯತ್ನ ಮಾಡೋದಾದ್ರೆ ಒಮ್ಮೆ ಮಾಡಿನೋಡಿ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!