Tuesday, August 16, 2022

Latest Posts

ಉದ್ಧವ್​ ಠಾಕ್ರೆಗೆ ಶಾಕ್ ಕೊಟ್ಟ ಶಿಕ್ಷಣ ಸಚಿವ: ಏಕನಾಥಗೆ ಜೈ ಎಂದ ಉದಯ್​ ಸಮಂತ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮ ಮುಂದುವರೆದಿದೆ. ಇದೀಗ ಮತ್ತೊಬ್ಬ ಸಚಿವ ಏಕನಾಥ ಶಿಂದೆ ಬಣಕ್ಕೆ ಸೇರಿದ್ದಾರೆ. ಈ ಮೂಲಕ ಎಂಟನೇ ಸಚಿವ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆ, ಎನ್​ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾವಿಕಾಸ್​ ಆಘಾಡಿ ಸರ್ಕಾರದ ವಿರುದ್ಧ ಏಕನಾಥ ಶಿಂದೆ ಬಂಡಾಯ ಸಾರಿದ್ದಾರೆ. ದಿನೇ ದಿನೇ ರಾಜಕೀಯ ಆಟ ಜೋರಾಗಿದೆ. ಈಗಾಗಲೇ 40ಕ್ಕೂ ಅಧಿಕ ಶಾಸಕರನ್ನು ಕಟ್ಟಿಕೊಂಡು ಅಸ್ಸಾಂ ಗುವಾಹಟಿಯಲ್ಲಿ ಶಿಂದೆ ಬೀಡು ಬಿಟ್ಟಿದ್ದಾರೆ.
ಈ ನಡುವೆ ಶಿಂದೆ ಗುವಾಹಟಿಯಲ್ಲೇ ಇದ್ದುಕೊಂಡು ಶಿವಸೇನೆಗೆ ಶಾಕ್​ ಮೇಲೆ ಶಾಕ್​ ಕೊಡುತ್ತಲೇ ಇದೆ. ಒಬ್ಬೊಬ್ಬರು ಬಂಡಾಯದ ಗುಂಪು ಸೇರಿಕೊಳ್ಳುತ್ತಲೇ ಇದ್ದಾರೆ. ಇದೀಗ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಉದಯ್​ ಸಮಂತ್​ ಶಿವಸೇನೆಗೆ ಶಾಕ್​ ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss