ಅಕ್ಟೋಬರ್ 1ರಿಂದ ಅನ್ವಯ; ‘ಆನ್ಲೈನ್ ಗೇಮಿಂಗ್’ ಮೇಲೆ ಶೇ.28ರಷ್ಟು ತೆರಿಗೆ ಜಾರಿ: ನಿರ್ಮಲಾ ಸೀತಾರಾಮನ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಅಕ್ಟೋಬರ್ 1 ರಿಂದ ಆನ್ಲೈನ್ ಗೇಮಿಂಗ್ ಮೇಲಿನ 28% ತೆರಿಗೆ ಜಾರಿಗೆ ಬರಲಿದೆ ಎಂದು  ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

51ನೇ ಜಿಎಸ್ಟಿ ಕೌನ್ಸಿಲ್ ಸಭೆಯ ಬಳಿಕ ಈ ಬಗ್ಗೆ ಮಾಹಿತಿ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಮಹಾರಾಷ್ಟ್ರ, ಗುಜರಾತ್, ಛತ್ತೀಸ್ ಘಢ , ಪಶ್ಚಿಮ ಬಂಗಾಳ, ಬಿಹಾರ ರಾಜ್ಯಗಳು ಶೇಕಡಾ 28 ರಷ್ಟು ತೆರಿಗೆಯ ಪರವಾಗಿವೆ ಮತ್ತು ಸಾಧ್ಯವಾದಷ್ಟು ಬೇಗ ಜಾರಿಗೆ ತರಬೇಕೆಂದು ಬಯಸಿವೆ. ದೆಹಲಿ, ಗೋವಾ, ಸಿಕ್ಕಿಂ ರಾಜ್ಯಗಳು 28% ಆನ್ಲೈನ್ ಗೇಮಿಂಗ್ ತೆರಿಗೆ ಮರುಪರಿಶೀಲಿಸಲು ಬಯಸಿವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!