ಶೂಟಿಂಗ್‌ ಸೆಟ್‌ಗೆ ನುಗ್ಗಿ 8 ರೂಪದರ್ಶಿಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಂದೂಕುಧಾರಿಗಳ ಗ್ಯಾಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮ್ಯೂಸಿಕ್ ವಿಡಿಯೋ ಚಿತ್ರೀಕರಣ ಸೆಟ್‌ ಗೆ ನುಗ್ಗಿದ ಬಂದೂಕುಧಾರಿಗಳ ಗುಂಪೊಂದು ಎಂಟು ರೂಪದರ್ಶಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ ಬರ್ಗ್‌ ನಲ್ಲಿ ನಡೆದಿದೆ.
ಜೋಹಾನ್ಸ್‌ಬರ್ಗ್‌ನ ಪಶ್ಚಿಮದಲ್ಲಿರುವ ಸಣ್ಣ ಪಟ್ಟಣವಾದ ಕ್ರುಗರ್ಸ್‌ಡಾರ್ಪ್‌ನ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಚಿತ್ರೀಕರಣಕ್ಕಾಗಿ ಸೆಟ್‌ ಸಿದ್ಧಪಡಿಸುತ್ತಿದ್ದಾಗ ಅಲ್ಲಿಗೆ ನುಗ್ಗಿದ 20ಕ್ಕೂ ಹೆಚ್ಚು ಬಂದೂಕುದಾರಿಗಳ ಗುಂಪು ಅಲ್ಲಿದ್ದ 8ಕ್ಕೂ ಹೆಚ್ಚು ಮಾಡೆಲ್‌ ಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಸಂತ್ರಸ್ತ ಯುವತಿಯರು 18 ರಿಂದ 35 ವರ್ಷ ವಯಸ್ಸಿನವರು ಎಂದು ಪೊಲೀಸರು ಹೇಳಿದ್ದಾರೆ.
ಚಿತ್ರೀಕರಣ ಸ್ಥಳದಲ್ಲಿದ್ದ ಪುರುಷರನ್ನು ವಿವಸ್ತ್ರಗೊಳಿಸಿ ಅವರ ವೈಯಕ್ತಿಕ ವಸ್ತುಗಳನ್ನು ದೋಚಲಾಗಿದೆ. ದಾಳಿಕೋರರು ವಿದೇಶಿ ಪ್ರಜೆಗಳಂತೆ ತೋರುತ್ತಿದ್ದು, ದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸುವ ʼಜಮಾ ಜಮಾʼಗಳು ಕೃತ್ಯವೆಸಗಿದ್ದಾರೆ ಎಂಬ ಸುಳಿವುಗಳು ಲಭ್ಯವಾಗಿವೆ.  ದಾಳಿಗೆ ಸಂಬಂಧಿಸಿದಂತೆ ಈವರೆಗೆ ಸುಮಾರು ಮೂವರು ಶಂಕಿತರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸ್ ಇಲಾಖೆ ಸಚಿವ ಭೆಕಿ ಸೆಲೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!