ನಮ್ಮ ವಿಜಯ ಅಥವಾ ಪ್ರಪಂಚದ ವಿನಾಶದೊಂದಿಗೆ ಯುದ್ಧ ಕೊನೆಗೊಳ್ಳುತ್ತದೆ: ಪುಟಿನ್ ಸಲಹೆಗಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಲಹೆಗಾರ ರಾಷ್ಟ್ರೀಯವಾದಿ ಅಲೆಕ್ಸಾಂಡರ್ ಡುಗಿನ್, ಉಕ್ರೇನ್‌ನೊಂದಿಗಿನ ರಷ್ಯಾದ ಯುದ್ಧವು ತಮ್ಮ ದೇಶದ ವಿಜಯದೊಂದಿಗೆ ಅಥವಾ ಪ್ರಪಂಚದ ನಾಶದೊಂದಿಗೆ ಕೊನೆಗೊಳ್ಳುತ್ತದೆ ಎಂಬ ಹೇಳಿಕೆ ನೀಡಿದ್ದಾರೆ. ಹಲವಾರು ತಿಂಗಳುಗಳಿಂದ ಉಕ್ರೇನ್ ಜೊತೆ ಹೋರಾಡುತ್ತಿರುವ ರಷ್ಯಾದ ಪಡೆ ಈಗಾಗಲೇ ಅನೇಕ ಪ್ರದೇಶಗಳಿಂದ ಹಿಂದೆ ಸರಿದಿವೆ.

ಇನ್ನೂ ಕೆಲವು ಪ್ರದೇಶಗಳಲ್ಲಿ ದಾಳಿ ಮುಂದುವರೆದಿದ್ದು, ಪ್ರಪಂಚದ ಇತರೆ ದೇಶಗಳು ಯುದ್ಧವನ್ನು ಕೊನೆಗೊಳಿಸುವಂತೆ ಸಲಹೆ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಅಲೆಕ್ಸಾಂಡರ್ ಡುಗಿನ್ ಸಂದರ್ಶನವೊಂದರಲ್ಲಿ ಮಾತನಾಡಿ, ವಿಶ್ವದಲ್ಲಿ ಒಂದು ದೇಶ ತನ್ನ ಪ್ರಾಬಲ್ಯ ಸಾಧಿಸುವುದನ್ನು ತಪ್ಪಿಸಲು, ಎಲ್ಲಾ ದೇಶಗಳು ಬಲಿಷ್ಠವಾಗಿರಲು ಬೆಂಬಲಿಸುತ್ತಾ ಈ ಯುದ್ಧವನ್ನು ಮಾಡಲಾಗುತ್ತಿದೆ ಎಂದು ವ್ಯಾಖ್ಯಾನಿಸಿದ್ದಾರೆ.

ಇದು ರಷ್ಯಾ, ಉಕ್ರೇನ್, ಯುರೋಪ್‌ಗೆ ಸಂಬಂಧಿಸಿದ ಯುದ್ಧವಲ್ಲ, ಪಶ್ಚಿಮ ಮತ್ತು ಇತರ ದೇಶಗಳಿಗೆ ಸಂಬಂಧಿಸಿದೆ. ಇದು ಪ್ರಾಬಲ್ಯದ ವಿರುದ್ಧ ಮಾನವೀಯ ಪ್ರತಿಕ್ರಿಯೆಯಾಗಿದೆ. ಎರಡು ಸಂದರ್ಭಗಳಲ್ಲಿ ಯುದ್ಧವನ್ನು ಕೊನೆಗೊಳಿಸುವ ಸಾಧ್ಯತೆಗಳಿವೆ. ಅದು ರಷ್ಯಾ ಗೆಲ್ಲಬೇಕು, ಅಥವಾ ಜಗತ್ತು ಸರ್ವನಾಶವಾಗಬೇಕು. ಗೆಲುವಿನ ಹೊರತಾಗಿ ಯಾವುದೇ ಪರಿಹಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.  ರಷ್ಯಾ ದೊಡ್ಡ ಮಟ್ಟದ ವಿನಾಶ ಸೃಷ್ಟಿ ಮಾಡುತ್ತಿದ್ದರೂ ಉಕ್ರೇನ್ ಅನೇಕ ದೇಶಗಳ ಸಹಾಯದಿಂದ ಆ ದಾಳಿಗಳನ್ನು ದಿಟ್ಟತನದಿಂದ ಎದುರಿಸುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!