ಚುನಾವಣೆ ಅಲರ್ಟ್: ಸೊನ್ನ ಚೆಕ್‌ಪೋಸ್ಟ್‌‌ನಲ್ಲಿ ದಾಖಲೆಯಿಲ್ಲದ 3.2 ಲಕ್ಷ ರೂ. ಜಪ್ತಿ!

ಹೊಸದಿಗಂತ ವರದಿ,ಕಲಬುರಗಿ:

ಜಿಲ್ಲೆಯ ಅಫಜಲಪುರ ತಾಲೂಕಿನ ಸೊನ್ನ ಚೆಕ್‌ಪೋಸ್ಟ್‌‌ನಲ್ಲಿ ದಾಖಲೆಯಿಲ್ಲದ 3 ಲಕ್ಷ 2 ಸಾವಿರ ರೂ ನಗದು ಹಣವನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಅಫಜಲಪುರ ಪಟ್ಟಣದ ಶ್ರೀಕಾಂತ್ ಮ್ಯಾಳೇಸಿ ಎಂಬುವರು ಬೈಕ್ ಮೇಲೆ 3 ಲಕ್ಷ 2 ಸಾವಿರ ರೂ ಹಣ ತೆಗೆದುಕೊಂಡು ಮಹಾರಾಷ್ಟ್ರದ ನಾಗಣಸೂರ್‌ಗೆ ಹೋಗುತ್ತಿದ್ದರು, ಈ ವೇಳೆ ಸೊನ್ನ ಚೆಕ್‌ಪೋಸ್ಟ್‌‌ನಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ ಹಣ ಪತ್ತೆಯಾಗಿದೆ.

ತೊಗರಿ ಮಾರಾಟದ ಹಣ ಇವೆ ಎಂದು ಶ್ರೀಕಾಂತ್ ಮ್ಯಾಳೇಸಿ ಹೇಳಿದ್ದಾರೆ, ಆದರೆ ಹಣಕ್ಕೆ ಯಾವುದೇ ದಾಖಲೆಯಿಲ್ಲದ ಕಾರಣ ಚೆಕ್‌ಪೋಸ್ಟ್‌ ಸಿಬ್ಬಂದಿಗಳು ಹಣವನ್ನು ಸಿಜ್ ಮಾಡಿದ್ದಾರೆ.

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!