ಅಂಕೋಲಾ | ಮಾಲಿಕರು ಇಲ್ಲದ ಕ್ಷಣ ಮನೆಗೆ ಬಿತ್ತು ಕನ್ನ: ಆಭರಣ, ಹಣ ಕಳವು

ಹೊಸದಿಗಂತ ವರದಿ, ಅಂಕೋಲಾ:

ಮನೆ ಮಾಲಿಕರು ಇಲ್ಲದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಸುಮಾರು 1.16 ಲಕ್ಷ ರೂಪಾಯಿ ಮೌಲ್ಯದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿರುವ ಘಟನೆ ತಾಲೂಕಿನ ಶೆಟಗೇರಿಯಲ್ಲಿ ನಡೆದಿದೆ.
ಶೆಟಗೇರಿ ಬಿಳಿಗಿರಿ ದೇವಸ್ಥಾನದ ಸಮೀಪದ ನಿವಾಸಿ ನಿವೃತ್ತ ಶಿಕ್ಷಕಿ ರತ್ನಾ ದೇವರಾಯ ನಾಯಕ ಎನ್ನುವವರ ಮನೆಯನ್ನು ಏಪ್ರಿಲ್ 5 ರ ರಾತ್ರಿ 11 ಗಂಟೆ ಮತ್ತು ಏಪ್ರಿಲ್ 6 ರ ಬೆಳಗ್ಗೆ 8.30 ರ ಅವಧಿಯಲ್ಲಿ ಕಳ್ಳತನ ಮಾಡಲಾಗಿದೆ.
ಮನೆಯ ಗೋಡೆಗೆ ಅಳವಡಿಸಿದ ಸೋಲಾರ್ ಸೆನ್ಸಾರ್ ವಾಲ್ ಲೈಟ್ ಕಿತ್ತು ಮುಂದಿನ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ನಾಲ್ಕು ವಾರ್ಡ್ ರೋಬ್ ಗಳನ್ನು ಮುರಿದು
40 ಸಾವಿರ ರೂಪಾಯಿ ಮೌಲ್ಯದ 10 ಗ್ರಾಂ ಚಿಕ್ಕ ಚೈನುಗಳು 24 ಸಾವಿರ ರೂಪಾಯಿ ಬೆಲೆಯ ಕಿವಿಯೋಲೆ,20 ಸಾವಿರ ಬೆಲೆಯ ಉಂಗುರ, 32 ಸಾವಿರ ಬೆಲೆಯ ಜೋಡಿ ಕಿವಿಯೋಲೆ ಮತ್ತು 30 ಸಾವಿರ ರೂಪಾಯಿ ನಗದು ಹಣ ಕಳ್ಳತನ ಮಾಡಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!