ಚುನಾವಣಾ ನೀತಿ ಸಂಹಿತೆ: ದಾಖಲೆ ಇಲ್ಲದ 6.70 ಲಕ್ಷ ರೂ. ಜಪ್ತಿ

ಹೊಸದಿಗಂತ ವರದಿ,ಬನವಾಸಿ:

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.70 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ಮಂಗಳವಾರ ಸಮೀಪದ ಯಡೂರಬೈಲ್ ಚೆಕ್​ಪೋಸ್ಟ್​ ನಲ್ಲಿ ಜಪ್ತಿ ಮಾಡಿದ್ದಾರೆ.

ಸೊರಬ ತಾಲ್ಲೂಕಿನ ಪುಟ್ನಳ್ಳಿ ಗ್ರಾಮದ ರೇಣುಕಾ ನಾಗರಾಜ ದೊಡ್ಮನಿ ಎಂಬುವವರ 1.50ಲಕ್ಷ ರೂ.ಗಳನ್ನು ಜಪ್ತಿ ಮಾಡಿದ್ದಾರೆ. ಮಗಳ ಮದುವೆಗೆ ಬಂಗಾರ ಖರೀದಿಸಲು ಶಿರಸಿಗೆ ಹಣ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾರೆ.

ಶಿರಸಿಯಿಂದ ಹಿರೇಕೆರೂರು ಸಾಗುತ್ತಿದ್ದ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸಂಕನಟ್ಟಿ ಗ್ರಾಮದ ಪರಶುರಾಮ ಯಲ್ಲಪ್ಪ ಎಂಬುವವರು ದಾಖಲೆಯಿಲ್ಲದೇ ಸಾಗಿಸುತ್ತಿದ್ದ 5.20ಲಕ್ಷ ರೂ.ಗಳನ್ನು ಜಪ್ತಿ ಮಾಡಲಾಗಿದೆ. ಉದ್ಯಮಕ್ಕೆ ಸಂಬಂಧಿಸಿದ ಹಣ ಎಂದು ತಿಳಿದುಬಂದಿದೆ. ಎರಡು ಪ್ರಕರಣಗಳಲ್ಲಿ ಹಣದ ದಾಖಲೆಯನ್ನು ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!