Thursday, June 1, 2023

Latest Posts

ಕಾಂಗ್ರೆಸ್ ಟಿಕೆಟ್ ವಂಚಿತ ನಂದಕುಮಾರ್’ಗೆ ಕೊಡಗಿನ ಚುನಾವಣಾ ಉಸ್ತುವಾರಿ?

ಹೊಸದಿಗಂತ ವರದಿ, ಮಡಿಕೇರಿ:

ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್’ಗೆ ಇದೀಗ ಕೊಡಗು ಜಿಲ್ಲೆಯ ಚುನಾವಣಾ ಉಸ್ತುವಾರಿ ನೀಡಲಾಗಿದೆ.
ಮಡಿಕೇರಿ ನಿವಾಸಿ ಹಾಗೂ ಮಡಿಕೇರಿ ನಗರಸಭೆಯ ಮಾಜಿ ಅಧ್ಯಕ್ಷರೂ ಆಗಿರುವ ಹೆಚ್.ಎಂ.ನಂದಕುಮಾರ್ ದಕ್ಷಿಣಕನ್ನಡ‌ ಜಿಲ್ಲೆಯ ಸುಳ್ಯ ವಿಧಾನಸಭಾ‌ ಕ್ಷೇತ್ರದಿಂದ ಸ್ಪರ್ಧೆ ಬಯಸಿದ್ದರು. ಆದರೆ ಕಾಂಗ್ರೆಸ್ ಹೈಕಮಾಂಡ್ ಅವರ ಬೇಡಿಕೆಗೆ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ನಂದಕುಮಾರ್ ಬೆಂಬಲಿಗರು ಒತ್ತಡ ಹೇರಿದ್ದರು. ಒಂದು ಹಂತದಲ್ಲಿ ನಂದಕುಮಾರ್ ಅವರೂ ಇದಕ್ಕೆ ಒಪ್ಪಿದಂತಿತ್ತು. ಆದರೆ ಕೊನೆಗಳಿಗೆಯಲ್ಲಿ ಅವರು ಮನಸ್ಸು ಬದಲಾಯಿಸಿದ್ದರು.
ಇದೀಗ ಅವರಿಗೆ ಕೊಡಗಿನ ಚುನಾವಣಾ ಉಸ್ತುವಾರಿಯನ್ನು ವರಿಷ್ಠರು ನೀಡಿರುವುದಾಗಿ ಹೇಳಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!