ಕೊಲೆಯೋ, ಆತ್ಮಹತ್ಯೆಯೋ: ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕೋರ್ಟ್ ಆದೇಶ

 ಹೊಸದಿಗಂತ ವರದಿ,ಹಾಸನ :

ನನ್ನ ತಾಯಿಯದ್ದು ಸಹಜ ಸಾವಲ್ಲ ಅವರನ್ನು ನನ್ನ ಅಣ್ಣ ಮತ್ತು ಅತ್ತಿಗೆಯೇ ಹತ್ಯೆ ಮಾಡಿದ್ದಾರೆ ಎಂದು ಮೃತ ಮಹಿಳೆಯ ಕುಟುಂಬಸ್ಥರು ಹಾಗೂ ಪ್ರೇಮ್ ಕುಮಾರ್ ಅನುಮಾನದ‌ ವ್ಯಕ್ತಪಡಿಸಿ, ಠಾಣೆಯಲ್ಲಿ ಮರುಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಇದೇ ಏ.19 ರಂದು ಸಕಲೇಶಪುರ ಉಪವಿಭಾಗೀಯ ದಂಡಾಧಿಕಾರಿ ಸಮ್ಮುಖದಲ್ಲಿ ಮಹಿಳೆಯ ಶವ ಹೊರ ತೆಗೆದು ಮರು ಮರಣೋತ್ತರ ಪರೀಕ್ಷೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ಮಲ್ಲಾಪುರ ಗ್ರಾಮದ ಲಕ್ಷ್ಮಮ್ಮ ಮೃತಪಟ್ಟಿರುವ ಮಹಿಳೆ. ಆಸ್ತಿಗಾಗಿ ಸುರೇಶ ಮತ್ತು ಆತನ ಪತ್ನಿ ಯುವರಾಣಿ ಅಲಿಯಾಸ್ ಕಾವ್ಯ ಇಬ್ಬರು ತಾಯಿ ಲಕ್ಷ್ಮಮ್ಮನ ಜೀವವನ್ನು ಬಲಿ ಪಡೆದಿದ್ದಾರೆ ಎಂಬುವುದು ಕುಟುಂಬಸ್ಥರ ಅನುಮಾನ. ತಾಯಿ ಸಾವನ್ನಪ್ಪಿರುವ ವೇಳೆ ದೇಹದಲ್ಲಿ ಗಾಯಗಳಾಗಿದ್ದವು, ಹಾಗೂ ಮದ್ಯಪಾನ ಸೇವಿಸಿ ಸಾವನ್ನಪ್ಪಲಾಗಿದೆ ಎಂದು ವೈಧ್ಯರು ಹೇಳಿದ್ದರು, ಆದರೆ ಇದ್ಯಾವುದು ಮರೋಣತ್ತ ಪರೀಕ್ಷೆ ವರದಿಯಲ್ಲಿ ಇಲ್ಲ. ಹಾಗೆ ಸುರೇಶ್ ತಾಯಿ ಸಾವನ್ನಪ್ಪಿದ ನಂತರ ನಮಗೆ ಕೊಲೆ ಬೆದರಿಕೆ ಸಹ ಹಾಕಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪ್ರಕರಣವನ್ನು ತನಿಖೆ ಮಾಡುವಂತೆ ಅರೇಹಳ್ಳಿ ಪೋಲಿಸ್ ಠಾಣೆಗೆ ಮರು ದೂರು ದಾಖಲಿಸಿದ್ದರು.

ಮೃತ ಲಕ್ಷ್ಮಮ್ಮನ ಕಿರಿಯ ಮಗ ಪ್ರೇಮ್ ಕುಮಾರ್ ಹಾಗೂ ಕುಟುಂಬಸ್ಥರ ದೂರು ಆಧರಿಸಿ ಪೊಲೀಸರ, ಸಕಲೇಶಪುರ ಉಪವಿಭಾಗೀಯ ದಂಡಾಧಿಕಾರಿ ಸಮ್ಮುಖದಲ್ಲಿ ಏ.19 ರಂದು ಲಕ್ಷ್ಮಮ್ಮನವರ ಶವ ಹೊರ ತೆಗೆದು ಮರು ಮರಣೋತ್ತರ ಪರೀಕ್ಷೆ ನಡೆಸಲು ನ್ಯಾಯಾಲಯ ಆದೇಶಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!