October 10, 2026
Saturday, October 10, 2026
spot_img

ತಮಿಳುನಾಡು, ಬಂಗಾಳದಲ್ಲಿ ಚುನಾವಣೆ: 48 ಗಂಟೆಗಳ ಕಾಲ ಡ್ರೈ ಡೇ ಘೋಷಿಸಿದ ಆಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳುನಾಡು, ಬಂಗಾಳದ ವಿಧಾನ ಸಭಾ ಚುನಾವಣಾ ಅಖಾಡ ರಂಗೇರಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಮತಬೇಟೆ ನಡೆಸಿದ್ದಾರೆ. ಇದೀಗ ಮತದಾನ ನಡೆಯಲು ಕೆಲವೇ ದಿನಗಳು ಬಾಕಿ ಉಳಿದಿದ್ದು, ಹೀಗಾಗಿ ಚುನಾವಣಾ ಆಯೋಗವು 48 ಗಂಟೆಗಳ ಕಾಲ ಡ್ರೈ ಡೇ ಘೋಷಿಸಿ ಅಧಿಕೃತ ಆದೇಶ ಹೊರಡಿಸಿದೆ.

ಸಾಮಾನ್ಯವಾಗಿ ಮತದಾನಕ್ಕೆ ಕೆಲವೇ ದಿನ ಬಾಕಿ ಇರುವ ವೇಳೆ ಡ್ರೈ ಡೇ ಘೋಷಿಸುವುದು ನಿಯಮ. ಈ ವೇಳೆ ಯಾವುದೇ ಹೊಟೇಲ್ ಗಳು, ರೆಸ್ಟೋರೆಂಟ್‌ಗಳು, ಮದ್ಯದ ಅಂಗಡಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧದಲ್ಲಿ ಇರುತ್ತದೆ.

ಮತದಾನ ಸಮಯದಲ್ಲಿ ಯಾವುದೇ ವ್ಯಕ್ತಿಗೂ ಯಾವುದೇ ರೀತಿಯ ಪ್ರಭಾವ ಬೀರದಂತೆ ತಡೆಯಲು ಜೊತೆಗೆ ಶಾಂತಿಯುತ ಮತದಾನಕ್ಕಾಗಿ ಚುನಾವಣಾ ಆಯೋಗ ಈ ನಿರ್ಧಾರ ತೆಗೆದುಕೊಂಡಿದೆ.

ಜೊತೆಗೆ ಮತ ಎಣಿಕೆ ಸಮಯದಲ್ಲೂ ಕೂಡ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮದ್ಯ ಮಾರಾಟ ಸಂಪೂರ್ಣ ನಿಷೇಧದಲ್ಲಿ ಇರಲಿದ್ದು, ಈ ವೇಳೆ ಆಯೋಗವು ಕಟ್ಟುನಿಟ್ಟಿನ ನಿರ್ಬಂಧ ಹೇರಿದ್ದಾರೆ.

Must Read