Thursday, March 23, 2023

Latest Posts

ಎಲೆಕ್ಟ್ರಿಕಲ್ ದ್ವಿಚಕ್ರ ವಾಹನ ಸ್ಫೋಟ: ಪ್ರಾಣಾಪಾಯದಿಂದ ಪಾರು

ಹೊಸದಿಗಂತ ವರದಿ,ಮದ್ದೂರು :

ಎಲೆಕ್ಟ್ರಿಕಲ್ ದ್ವಿಚಕ್ರ ವಾಹನವನ್ನು ಚಾರ್ಜಿಂಗ್ ಹಾಕಿದ್ದ ವೇಳೆ ಸ್ಪೋಟಗೊಂಡು ಒರ್ವ ಬಾಲಕ, ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ವಳಗೆರೆಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಜರುಗಿದೆ.
ವಳಗೆರೆಹಳ್ಳಿ ಗ್ರಾಮದ ಮುತ್ತುರಾಜ್ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು,ಮನೆಯಲ್ಲಿದ್ದ ವಿದ್ಯುತ್ ಉಪಕರಣ ಟಿವಿ, ಫ್ರ್ಜ್‌ಿ ಹಾಗೂ ದವಸ ಧಾನ್ಯ ಸೇರಿದಂತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಮುತ್ತುರಾಜ್ ಮದ್ದೂರಿನ ಪ್ರವಾಸಿ ಮಂದಿರದ ಬಳಿ ಇರುವ ಇ-ರೂಟ್ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಬೈಕ್ ಅನ್ನು ಏಳು ತಿಂಗಳ ಹಿಂದೆ ಖರೀದಿ ಮಾಡಿದ್ದರು.
ಎಂದಿನಂತೆ ತಮ್ಮ ಮನೆಯ ಒಳಗೆ ನಿಲ್ಲಿಸಿದ್ದ ಬೈಕ್ ಗೆ ಚಾರ್ಜಿಂಗ್ ಹಾಕಿದ್ದಾರೆ. ಕೆಲ ಹೊತ್ತಿನಲ್ಲೇ ಬೈಕ್ ಇದ್ದಕ್ಕಿದ್ದಂತೆ ಸ್ಪೋಟಗೊಂಡಿದೆ. ಇದರಿಂದ ಮನೆಯ ಗಾಜಿನ ಕಿಟಕಿಗಳು ಸ್ಪೋಟಗೊಂಡಿವೆ.
ಇದರಿಂದ ಇದ್ದಕ್ಕಿದ್ದಂತೆ ಬೆಂಕಿಯ ಜ್ವಾಲೆ ಕಾಣಿಸಿಕೊಂಡು ಬೆಂಕಿ ಇಡೀ ಮನೆಯ ವಿವಿಧೆಡೆ ವ್ಯಾಪಿಸಿದೆ.
ವ್ಯಾಪಿಸಿದ ಪರಿಣಾಮ ಟಿವಿ, ಫ್ರ್ಜ್ಿ, ಡೈನಿಂಗ್ ಟೇಬಲ್, ಎರಡು ಮೊಬೈಲ್ ಎಲೆಕ್ಟ್ರಾನಿಕ್ ವೈರ್ ಗಳು ಹಾಗೂ ಮನೆಯಲ್ಲಿ ದಾಸ್ತಾನು ಮಾಡಿದ್ದ ದವಸ ಧಾನ್ಯ ಬೆಂಕಿಯಿಂದ ಭಸ್ಮವಾಗಿವೆ. ಇದರಿಂದ ಆತಂಕಗೊಂಡ ಮುತ್ತುರಾಜ್ ಮತ್ತು ಆತನ ಕುಟುಂಬದವರು ಮನೆಯಿಂದ ಹೊರ ಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಕ್ಕ ಪಕ್ಕದ ನಿವಾಸಿಗಳು ಧಾವಿಸಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಅಳಿ ದುಳಿದ ಪದಾರ್ಥಗಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!