‘ಕಬ್ಜ‘ ಸಿನಿಮಾದ ಆನ್​ಲೈನ್ ಟಿಕೆಟ್ ಬುಕಿಂಗ್ ಓಪನ್: ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಪೇಂದ್ರ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕಬ್ಜ‘ (Kabzaa)ದ ಆನ್​ಲೈನ್ ಟಿಕೆಟ್ ಬುಕಿಂಗ್ (Online Ticket) ಮಾರ್ಚ್ 12ರ ಸಂಜೆ 6 ಗಂಟೆ 1 ನಿಮಿಷಕ್ಕೆ ಪ್ರಾರಂಭವಾಗಿದೆ. ಪ್ರಸ್ತುತ ಬೆಂಗಳೂರು (Bengaluru) ಹಾಗೂ ಮೈಸೂರಿನ (Mysore) ಎರಡು ಮಲ್ಟಿಫ್ಲೆಕ್ಸ್​ಗಳಲ್ಲಿ ಬುಕಿಂಗ್ ಪ್ರಾರಂಭವಾಗಿದ್ದು, ಬುಕಿಂಗ್ ಓಪನ್ ಆದ ಕೆಲವೇ ನಿಮಿಷಗಳಲ್ಲಿ ಹಲವು ಶೋಗಳು ಸೋಲ್ಡ್ ಔಟ್ ಆಗಿದೆ.

ಬೆಂಗಳೂರಿನ ರಾಜ್​ಕುಮಾರ್ ರಸ್ತೆ ಒರಾಯಿನ್ ಮಾಲ್​ನ ಪಿವಿಆರ್​ನ ಎರಡು ಸ್ಕ್ರೀನ್​ನಲ್ಲಿ 10 ಶೋಗಳಿಗೆ ಟಿಕೆಟ್ ಬುಕಿಂಗ್ ಓಪನ್ ಆಗಿದ್ದು ಮಾರ್ಚ್ 17ರ ಎಲ್ಲ ಹತ್ತು ಶೋಗಳಿಗೆ ಈಗಾಗಲೇ ಬಹುತೇಕ ಸಂಪೂರ್ಣ ಬುಕಿಂಗ್ ಆಗಿ ಹೋಗಿದೆ.

ಇನ್ನು ಮೈಸೂರಿನ ಹಬಿಟಾಟ್ ಮಾಲ್​ನ ಡಿಸಿಆರ್ ಮಲ್ಟಿಪ್ಲೆಕ್ಸ್​ನಲ್ಲಿ ಸಹ ಟಿಕೆಟ್ ಬುಕಿಂಗ್​ ಓಪನ್ ಆಗಿದ್ದು ಅಲ್ಲಿ ಮೊದಲ ದಿನವೇ 14 ಶೋ ನೀಡಲಾಗಿದ್ದು ಎರಡು ಶೋಗಳಿಗೆ ಬಹುತೇಕ ಎಲ್ಲ ಸೀಟುಗಳು ಬುಕ್ ಆಗಿದ್ದರೆ, ಉಳಿದ ಶೋಗಳಿಗೆ ಬುಕಿಂಗ್ ನಡೆಯುತ್ತಿದೆ. ಕರ್ನಾಟಕದಲ್ಲಿ 400ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಕಬ್ಜ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ಸದ್ಯಕ್ಕೆ ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್​ಗಳಲ್ಲಿ ಮಾತ್ರವೇ ಆನ್​ಲೈನ್ ಬುಕಿಂಗ್ ಓಪನ್ ಆಗಿದೆ. ಹೈದರಾಬಾದ್​ನಲ್ಲಿ ನಾಲ್ಕು ಚಿತ್ರಮಂದಿರಗಳಲ್ಲಿ ಮಾತ್ರವೇ ಬುಕಿಂಗ್ ಓಪನ್ ಆಗಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಚಿತ್ರಮಂದಿರಗಳು ಹಾಗೂ ಶೋಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

‘ಕಬ್ಜ’ ಸಿನಿಮಾವು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಆಗಲಿದ್ದು, ಇನ್ನಷ್ಟೆ ಓಪನ್ ಆಗಬೇಕಿದೆ.

ಕಬ್ಜ ಸಿನಿಮಾವು ವಿಶ್ವದಾದ್ಯಂತ ಮಾರ್ಚ್ 17 ರಂದು ತೆರೆಗೆ ಬರಲಿದೆ. ಸಿನಿಮಾದಲ್ಲಿ ಉಪೇಂದ್ರ ಜೊತೆಗೆ, ಸುದೀಪ್, ಶಿವರಾಜ್ ಕುಮಾರ್ ಸಹ ಅತಿಥಿ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಶ್ರೀಯಾ ಶರಣ್ ನಾಯಕಿ. ಸಿನಿಮಾವನ್ನು ಆರ್.ಚಂದ್ರು ನಿರ್ದೇಶನ ಮಾಡಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!