Friday, March 24, 2023

Latest Posts

‘ದಿ ಕಪಿಲ್​ ಶರ್ಮಾ ಶೋ’ ಗೆ ಪ್ರದಾನಿ ಮೋದಿ ಬರ್ತಾರಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ದಿ ಕಪಿಲ್​ ಶರ್ಮಾ ಶೋ’ ಕುರಿತು ಕೇಳಿರುತ್ತೀರಾ. ಬಾಲಿವುಡ್ ಕಾಮಿಡಿಯನ್ ಕಪಿಲ್​ ಶರ್ಮಾ ನಡೆಸಿಕೊಡುವ ಈ ಕಾರ್ಯಕ್ರಮ ನೋಡದವರೇ ಇಲ್ಲ.

ಇದೀಗ ‘ದಿ ಕಪಿಲ್​ ಶರ್ಮಾ ಶೋ’ ಜೊತೆ ಪ್ರಧಾನಿ ಮೋದಿ ಹೆಸರು ಕೂಡ ಕೇಳಿಬರುತ್ತಿದೆ.

ಹೌದು, ಕಪಿಲ್​ ಶರ್ಮಾ ನಟನೆಯ ‘ಸ್ವಿಗಾಟೋ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಪ್ರಯುಕ್ತ ಮಾಧ್ಯಮಗಳು ನಡೆಸಿದ ಸಂದರ್ಶನದಲ್ಲಿ ಮೋದಿ ವಿಷಯ ಕೂಡ ಪ್ರಸ್ತಾಪ ಆಗಿದೆ. ತಮ್ಮ ಕಾಮಿಡಿ ಶೋಗೆ ಬರುವಂತೆ ಮೋದಿಗೆ ಆಹ್ವಾನ ನೀಡಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಕಪಿಲ್​ ಶರ್ಮಾ (Kapil Sharma) ಈಗ ನೆನಪು ಮಾಡಿಕೊಂಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಆಗುವ ಅವಕಾಶ ಸಿಕ್ಕಿತ್ತು. ಆಗ ಅವರು ‘ದಿ ಕಪಿಲ್​ ಶರ್ಮಾ ಶೋ’ಗೆ ಬನ್ನಿ ಎಂದು ಆಹ್ವಾನ ನೀಡಿದ್ದರಂತೆ. ‘ಸರ್​ ನೀವು ನಮ್ಮ ಕಾರ್ಯಕ್ರಮಕ್ಕೆ ಬರಬೇಕು ಅಂತ ನಾನು ಕರೆದೆ. ಅವರು ಇಲ್ಲ ಅಂತ ಹೇಳಲಿಲ್ಲ. ಯಾವಾಗಲಾದರೂ ಬರುವುದಾಗಿ ತಿಳಿಸಿದರು. ವಿರೋಧ ಪಕ್ಷದವರೇ ಸಿಕ್ಕಾಪಟ್ಟೆ ಕಾಮಿಡಿ ಮಾಡುತ್ತಿದ್ದಾರೆ ಅಂತ ಹೇಳಿದರು. ಅವರು ನಮ್ಮ ಶೋಗೆ ಬಂದರೆ ನಮ್ಮ ಸೌಭಾಗ್ಯ’ ಎಂದಿದ್ದಾರೆ ಕಪಿಲ್​ ಶರ್ಮಾ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!