ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಅತ್ಯುತ್ತಮ ಬ್ರ್ಯಾಂಡ್ ಆಗಿ ಐಟಿ ದೈತ್ಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಹೊರಹೊಮ್ಮಿದೆ.
ಟಾಪ್ 50 ಬ್ರ್ಯಾಂಡ್ ಪಟ್ಟಿ ಬಿಡುಗಡೆಯಾಗಿದ್ದು, ಟಿಸಿಎಸ್ 1,09,576 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ಅಗ್ರಸ್ಥಾನದಲ್ಲಿದೆ. ತದನಂತರದ ಸ್ಥಾನದಲ್ಲಿ ರಿಲಯನ್ಸ್ ಹಾಗೂ ಇನ್ಫೋಸಿಸ್ ಇದೆ.
ಟಿಸಿಎಸ್ ಕಂಪನಿಯಲ್ಲಿ ಮುಖ್ಯ ಬದಲಾವಣೆಯೊಂದು ಆಗಿದ್ದು, 22 ವರ್ಷಗಳಿಂದ ಕಂಪನಿ ಸಿಇಒ ಆಗಿದ್ದ ಗೋಪಿನಾಥನ್ ಅವರು ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಇಂದಿನಿಂದ ನೂತನ ಸಿಇಒ ಕೃತಿವಾಸನ್ ಅವರು ಸಿಇಒ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.