ಟ್ರಂಪ್‌ ಮೇಲಿನ ಟ್ವಿಟರ್ ನಿರ್ಬಂಧ ತೆಗೆಯುತ್ತೇನೆಂದ ಮಸ್ಕ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೇಲಿನ ನಿಷೇಧವನ್ನು ತೆಗೆಯುವುದಾಗಿ ಟ್ವೀಟರ್‌ ಮಾಲೀಕ ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಫೈನಾನ್ಷಿಯಲ್ ಟೈಮ್ಸ್ ಫ್ಯೂಚರ್ ಆಫ್ ದಿ ಕಾರ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಟೆಸ್ಲಾ ಮುಖ್ಯಸ್ಥ “ಟ್ವೀಟರ್‌ ನಿಂದ ನಿಷೇಧವು ಮಾಜಿ ಅಧ್ಯಕ್ಷ ಟ್ರಂಪ್‌ ಧ್ವನಿಯನ್ನು ಮೌನಗೊಳಿಸಿಲ್ಲ. ಬದಲಾಗಿ ಅವರ ಪ್ರಸಿದ್ಧಿಯನ್ನು ಹೆಚ್ಚಿಸಿದೆ. ಈ ನಿಷೇಧವು ನೈತಿವಾಗಿ ತಪ್ಪು ಮತ್ತು ಮೂರ್ಖತನ. ಆದ್ದರಿಂದ ಡೊನಾಲ್ಡ್ ಟ್ರಂಪ್ ಅವರ ಮೇಲಿನ ಟ್ವಿಟರ್‌ನ ನಿಷೇಧವನ್ನು ಹಿಂಪಡೆಯಲಾಗುತ್ತದೆ.” ಎಂದು ಹೇಳಿದ್ದಾರೆ.

ಜನೆವರಿ 6 ರ ವಾಷಿಂಗ್ಟನ ಗಲಭೆಯ ನಂತರ ʼಹಿಂಸಾಚಾರವನ್ನು ಮತ್ತಷ್ಟು ಪ್ರಚೋದಿಸುವ ಅಪಾಯವನ್ನುʼ ಉಲ್ಲೇಖಿಸಿ ಟ್ವೀಟರ್‌ ನಿಂದ ಡೊನಾಲ್ಡ್‌ ಟ್ರಂಪ್‌ ಅವರನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ಅವರ ಮೇಲಿನ ನಿಷೇಧವನ್ನು ಹಿಂಪಡೆಯುವುದಾಗಿ ನೂತನ ಮಾಲೀಕ ಮಸ್ಕ್‌ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!