ಗಣರಾಜ್ಯೋತ್ಸವ| ಭಾರತೀಯ ರಾಯಭಾರ ಕಚೇರಿಗಳಲ್ಲಿ ಅದ್ದೂರಿ ಆಚರಣೆ, ಜಾಗತಿಕ ನಾಯಕರಿಂದ ಶುಭಾಶಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದ 74ನೇ ಗಣರಾಜ್ಯೋತ್ಸವವನ್ನು ಗುರುವಾರದಂದು ದೇಶಾದ್ಯಂತ ಇರುವ ರಾಯಭಾರ ಕಚೇರಿಗಳು ಬಹಳ ಅದ್ದೂರಿಯಾಗಿ ಆಚರಿಸುತ್ತಿವೆ. ಅಮೆರಿಕ ರಾಯಭಾರ ಕಚೇರಿಯು ದೇಶದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಸುಮಧುರ ಗೀತೆಯನ್ನು ತಮ್ಮ ಟ್ವಿಟ್ಟರ್‌, ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಗಾಯಕಿ ಪವಿತ್ರಾ ಚಾರಿ ಅವರು 2023 ರ ಗ್ರ್ಯಾಮಿ-ನಾಮನಿರ್ದೇಶಿತ ಆಲ್ಬಂನಲ್ಲಿ ಕಾಣಿಸಿಕೊಂಡಿದ್ದಾರೆ. ಯುಎಸ್ ಆಫೀಸರ್ ರಾಘವನ್ ಕೊಳಲು ನುಡಿಸುತ್ತಿದ್ದರೆ, ಸ್ಟೀಫನಿ ಗಿಟಾರ್ ನುಡಿಸುತ್ತಾ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ʻಭಾರತದ 74ನೇ ಗಣರಾಜ್ಯೋತ್ಸವದ ಶುಭಾಶಯಗಳು! ನಾವು ಭಾರತದ #ಗಣರಾಜ್ಯೋತ್ಸವವನ್ನು ಭಾರತದ ರಾಷ್ಟ್ರೀಯ ಗೀತೆ ವಂದೇ ಮಾತರಂ ಹಾಡುವುದರೊಂದಿಗೆ ಆಚರಿಸುತ್ತಿದ್ದೇವೆ!” ಎಂದು ಭಾರತೀಯ ಯುಎಸ್ ರಾಯಭಾರ ಕಚೇರಿಯು ಇನ್‌ಸ್ಟಾ ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆದಿದೆ.

ಆಸ್ಟ್ರೇಲಿಯಾದಲ್ಲಿ ಭಾರತೀಯ ಹೈಕಮಿಷನ್ ಸಂಭ್ರಮಾಚರಣೆಯನ್ನು ಹಮ್ಮಿಕೊಂಡಿದೆ. ನೇಪಾಳದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತದ ಗಣರಾಜ್ಯೋತ್ಸವವನ್ನು ಆಚರಿಸಲು ಸ್ಥಳೀಯ ಬ್ಯಾಂಡ್‌ನೊಂದಿಗೆ ಸಂಗೀತ ಕಚೇರಿಯನ್ನು ಆಯೋಜಿಸಿದೆ.

ಇರಾಕ್‌ನ ಬಾಗ್ದಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಕಟ್ಟಡ 74ನೇ ಗಣರಾಜ್ಯೋತ್ಸವದ ತ್ರಿವರ್ಣ ರಂಗಿನಿಂದ ಕಂಗೊಳಿಸುತ್ತಿದೆ.

ಭಾರತದ 74ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರು ಭಾರತ ಸರ್ಕಾರ ಮತ್ತು ಜನತೆಗೆ ಶುಭಾಶಯಗಳನ್ನು ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.

“ಭಾರತೀಯ ಸಂವಿಧಾನದ ಯಶಸ್ಸು ರಾಷ್ಟ್ರಗಳಿಗೆ ಸ್ಫೂರ್ತಿಯಾಗಿದೆ. ಮತ್ತು ಭಾರತೀಯ ಪ್ರಜಾಪ್ರಭುತ್ವವು ಅಭಿವೃದ್ಧಿ ಹೊಂದುತ್ತಿದೆ. 74 ನೇ ಗಣರಾಜ್ಯೋತ್ಸವದಂದು #ಭಾರತದ ಸರ್ಕಾರ ಮತ್ತು ಜನರಿಗೆ ನಮ್ಮ ಆತ್ಮೀಯ ಶುಭಾಶಯಗಳು. ಭಾರತ ಶಾಂತಿ, ಪ್ರಗತಿ ಮತ್ತು ಸಮೃದ್ಧಿಯನ್ನು ಬಯಸುತ್ತದೆ.” ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!