ಗಣರಾಜ್ಯೋತ್ಸವ| ಕರ್ತವ್ಯ ಪಥದಲ್ಲಿ ದೇಶದ ಸಂಸ್ಕೃತಿ ಅನಾವರಣ: ವಿವಿಧ ರಾಜ್ಯಗಳ 23ಸ್ತಬ್ಧಚಿತ್ರ ಪ್ರದರ್ಶನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ತನ್ನ 74 ನೇ ಗಣರಾಜ್ಯೋತ್ಸವವನ್ನು ಜನವರಿ 26 ರಂದು ದೇಶಾದ್ಯಂತ ಉತ್ಸಾಹದಿಂದ ಆಚರಿಸುತ್ತಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ದೇಶದ ವಿವಿಧ ಸಂಸ್ಕೃತಿ ಬಿಂಬಸುವ ಸ್ತಬ್ಥಚಿತ್ರಗಳ ಅನಾವರಣವಾಗಿವೆ. ವಿಶೇಷವಾಗಿ ಕರ್ನಾಟಕದಿಂದ ನಾರಿ ಶಕ್ತಿ ಪರಿಕಲ್ಪನೆಯಡಿಯಲ್ಲಿ ತನ್ನ ಸ್ತಬ್ಧ ಚಿತ್ರ ಪ್ರದರ್ಶಿಸಿದೆ. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಈ ಬಾರಿ ಒಟ್ಟು 23 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಇಂದು ದೇಶದ ರಾಜ್ಯಹಾಗೂ ಕೇಂದ್ರಾಡಳಿತ ಪ್ರದೇಶಗಳ 17 ಸ್ತಬ್ಧಚಿತ್ರ, ಮತ್ತು ಕೇಂದ್ರದ ವಿವಿಧ ಸಚಿವಾಲಯಗಳ 6 ಟ್ಯಾಬ್ಲೊಗಳು ಪ್ರದರ್ಶನಗೊಂಡಿವೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಕರ್ನಾಟಕ- ನಾರಿಯ ಶಕ್ತಿ ಸ್ಥಬ್ಧಚಿತ್ರ
  • ಆಂಧ್ರ ಪ್ರದೇಶ, ಪ್ರಭಾಲ ತೀರ್ಥಂ – ಮಕರ ಸಂಕ್ರಾಂತಿಯ ಸಮಯದಲ್ಲಿ ರೈತರ ಹಬ್ಬ
  • ಅಸ್ಸಾಂ – ವೀರರ ಮತ್ತು ಆಧ್ಯಾತ್ಮಿಕತೆಯ ನಾಡು
  • ಲಡಾಖ್- ಪ್ರವಾಸೋದ್ಯಮ ಮತ್ತು ಲಡಾಖ್‌ನ ಸಂಯೋಜಿತ ಸಂಸ್ಕೃತಿ
  • ಉತ್ತರಾಖಂಡ- ಮಾನಸಖಂಡ
  • ತ್ರಿಪುರ- ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯೊಂದಿಗೆ ತ್ರಿಪುರಾದಲ್ಲಿ ಪ್ರವಾಸೋದ್ಯಮ ಮತ್ತು ಸಾವಯವ ಕೃಷಿಯ ಮೂಲಕ ಸುಸ್ಥಿರ ಜೀವನೋಪಾಯ.
  • ಗುಜರಾತ್- ಕ್ಲೀನ್ ಗ್ರೀನ್ ಎನರ್ಜಿ ಸಮರ್ಥ ಗುಜರಾತ್
  • ಜಾರ್ಖಂಡ್- ಬಾಬಾ ಬೈದ್ಯನಾಥ ಧಾಮ್
  • ಅರುಣಾಚಲ ಪ್ರದೇಶ- ಅರುಣಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮದ ನಿರೀಕ್ಷೆಗಳು
  • ಜಮ್ಮು ಮತ್ತು ಕಾಶ್ಮೀರ- ನಯಾ ಜಮ್ಮು ಮತ್ತು ಕಾಶ್ಮೀರ
  • ಕೇರಳ- ನಾರಿ ಶಕ್ತಿ
  • ಪಶ್ಚಿಮ ಬಂಗಾಳ- ಕೋಲ್ಕತ್ತಾದಲ್ಲಿ ದುರ್ಗಾ ಪೂಜೆ: ಯುನೆಸ್ಕೋದಿಂದ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯನ್ನು ಬರೆಯುವುದು
  • ಮಹಾರಾಷ್ಟ್ರ- ಸಾಡೆ ತೀನ್ ಶಕ್ತಿಪೀಠ ಮತ್ತು ನಾರಿ ಶಕ್ತಿ
  • ತಮಿಳುನಾಡು- ತಮಿಳುನಾಡಿನ ಮಹಿಳಾ ಸಬಲೀಕರಣ ಮತ್ತು ಸಂಸ್ಕೃತಿ
  • ಹರಿಯಾಣ- ಅಂತರಾಷ್ಟ್ರೀಯ ಗೀತಾ ಮಹೋತ್ಸವ
  • ದಾದರ್ ನಗರ ಹವೇಲಿ ಮತ್ತು ದಮನ್ ಮತ್ತು ದಿಯು- ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ
  • ಉತ್ತರ ಪ್ರದೇಶ- ಅಯೋಧ್ಯೆ ದೀಪೋತ್ಸವ

ಕೇಂದ್ರ ಸಚಿವಾಲಯಗಳ ಸ್ತಬ್ಧಚಿತ್ರಗಳು

  • ಕೃಷಿ ಸಂಶೋಧನಾ ಸಚಿವಾಲಯದಿಂದ ‘ಅಂತಾರಾಷ್ಟ್ರೀಯ ಮಿಲೆಟ್ಸ್​ ವರ್ಷ-2023’ ಥೀಮ್​
  • ಗಿರಿಜನರ ಸಮಸ್ಯೆಗಳ ಸಚಿವಾಲಯದಿಂದ ʻಏಕಲವ್ಯ ಮಾಡೆಲ್​ ರೆಸಿಡೆನ್ಸಿಯಲ್​ ಸ್ಕೂಲ್ʼ ಸ್ತಬ್ಧಚಿತ್ರ
  • ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋದಿಂದ ‘ನಶಾ ಮುಕ್ತ ಗುರಿ ನಮ್ಮ ಭಾರತ’
  • ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಿಂದ ‘ನಾರಿಶಕ್ತಿ’ ಥೀಮ್​ವುಳ್ಳ ಟ್ಯಾಬ್ಲೊ ಪ್ರದರ್ಶನ. ಭಾರತೀಯ ವಾಯುಸೇನೆ. ಯುದ್ಧ ವಿಮಾನ, ಸೇನೆಯಲ್ಲಿ ಮಹಿಳೆಯರ ಕರ್ತವ್ಯ ಕುರಿತ ಸ್ತಬ್ಧಚಿತ್ರ ಪ್ರದರ್ಶನ.
  • ಕೇಂದ್ರ ಲೋಕೋಪಯೋಗಿ ಇಲಾಖೆಯಿಂದ ‘ಜೈವಿಕ ವೈವಿಧ್ಯತೆಯ ಸಂರಕ್ಷಣೆ’ ಕುರಿತ ಸ್ತಬ್ಧಚಿತ್ರ
  • ಸಂಸ್ಕೃತಿ ಸಚಿವಾಲಯದಿಂದ ಪಶ್ಚಿಮ ಬಂಗಾಳ, ಕೇರಳ ಸಂಸ್ಕೃತಿಯ ಅನಾವರಣ. ಪಶ್ಚಿಮ ಬಂಗಾಳದ ಪುಡುದಿಯಾ, ಚಾವು ನೃತ್ಯ ಹಾಗೂ ಕೇರಳದ ವಿವಿಧ ನೃತ್ಯ ಪ್ರಕಾರಗಳ ಸ್ತಬ್ಧಚಿತ್ರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!