September 28, 2026
Monday, September 28, 2026
spot_img

ಜಾರ್ಖಂಡ್‌ ನಲ್ಲಿ ಎನ್‌ಕೌಂಟರ್‌: ಮಹಿಳಾ ನಕ್ಸಲ್ ಕಮಾಂಡರ್ ಸಹಿತ ನಾಲ್ವರ ಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್‌ನ ಛತ್ರ ಜಿಲ್ಲೆಯ ಪಿಪರ್ವಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ನಕ್ಸಲ್ ಕಮಾಂಡರ್ ಸಹಿತ ನಾಲ್ವರು ಸಾವನ್ನಪ್ಪಿದ್ದಾರೆ.

ತಲೆಗೆ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ಶಹದಿಯೋ ಮಹ್ತೊ ಮತ್ತು ಮಹಿಳಾ ಮಾವೋವಾದಿ ನತಾಶಾ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವುದನ್ನು ಭದ್ರತಾ ಸಿಬ್ಬಂದಿಗಳು ಖಚಿತಪಡಿಸಿದ್ದಾರೆ.

ನಕ್ಸಲರ ಕುರಿತು ಖಚಿತ ಮಾಹಿತಿ ಮೇರೆಗೆ ಜಾರ್ಖಂಡ್ ಪೊಲೀಸರ ಜೊತೆಗೆ, ಕೋಬ್ರಾ ಬೆಟಾಲಿಯನ್‌ನ ಸೈನಿಕರು ಛತ್ರ-ಹಜಾರಿಬಾಗ್ ಗಡಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಈ ವೇಳೆ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದೆ. ಎನ್ ಕೌಂಟರ್ ನಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದು, ಸ್ಥಳದಿಂದ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

Must Read