ಹೊಸದಿಗಂತ ವರದಿ ವಿಜಯಪುರ:
ಈ ಸ್ಟಿಂಗ್, ಸಿಡಿ ಎಲ್ಲ ಬಿಟ್ಟು, ರಾಜ್ಯದ ಬರದ ಬಗ್ಗೆ ವಿಚಾರ ಮಾಡಬೇಕು. ಬಿಜೆಪಿಗೆ ಕೇಂದ್ರದಲ್ಲಿ 12 ವರ್ಷ ಅವಕಾಶ ಕೊಟ್ಟಿದೆ. 12 ವರ್ಷದಲ್ಲಿ ರಾಜ್ಯಕ್ಕೇನಾದರೂ ಕೊಡುಗೆ ಬೇಕಲ್ಲ. ಸದ್ಯ ತಿನ್ನಲು ಕಾಳಿಲ್ಲ, ಆಹಾರ ಇಲ್ಲ, ಅದರ ಕಡೆ ಗಮನ ಹರಿಸಬೇಕು ಎಂದು ಶಾಸಕ ಶಿವಾನಂದ ಪಾಟೀಲ ಹೇಳಿದರು.
ರಾಜ್ಯದಲ್ಲಿ ಸ್ಟಿಂಗ್ ಸದ್ದು ವಿಚಾರಕ್ಕೆ ನಗರದಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸದ್ಯ ನೋಡಿ ವಿದೇಶಕ್ಕೆ ಸಕ್ಕರೆ ಕೊಡ್ತಿದ್ದ ದೇಶ, ಇದೀಗ ಸಕ್ಕರೆ ತರಿಸಿಕೊಳ್ಳುವ ಪರಿಸ್ಥಿತಿ ಬಂದಿದೆ, ಇದೆಂತಹ ದುರ್ದೈವದ ಸಂಗತಿ. ಇಡೀ ಜಗತ್ತಿನಲ್ಲಿ ಸಕ್ಕರೆ ಉತ್ಪಾದನೆ ಮಾಡುವ ಕಲವೇ ಕೆಲ ದೇಶಗಳಲ್ಲಿ ನಮ್ಮ ದೇಶ ಕೂಡ ಒಂದು. ಇಡೀ ಹಿಂದೂಸ್ಥಾನಕ್ಕೆ ಸಕ್ಕರೆ ಕೊಟ್ಟು ಸಕ್ಕರೆ ಉಳಿಸುವಂತಹ ಶಕ್ತಿ ನಮ್ಮದು. ದುರ್ದೈವ ವಶಾತ್ ಈ ಬಾರಿ ಇವರು ಸಕ್ಕರೆ ಹೊರ ದೇಶದಿಂದ ತರೆಸಿ ಕೊಂಡಿದ್ದಾರೆ ಎಂದರು.
ಪೆಟ್ರೋಲ್, ಡೀಸೆಲ್ನಂತರ ಇಂಪೋರ್ಟ್ ಮಾಡಿಕೊಳ್ತಾರೆ. ಇದೀಗ ಇಥೆನಾಲ್ ಕೂಡ ಇಂಪೋರ್ಟ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿದ್ದೇನೆ. ನಮ್ಮ ರೈತರಿಗೆ ಏನಾಗುತ್ತಿದೆ ಎಂಬುದ ಬಗ್ಗೆ ಧ್ವನಿ ಎತ್ತಿದರೆ ನಮ್ಮ ದೇಶಕ್ಕೆ ಒಳ್ಳೆಯದು ಆಗುತ್ತಿತ್ತು. ನಾನು ಹಿಂದೆ ಸಕ್ಕರೆ ಮಂತ್ರಿ ಇದ್ದಾಗ ಸಹಿತ ಈ ವಿಚಾರವಾಗಿ ದ್ವನಿ ಎತ್ತಿದ್ದೆ. ರೈತರ ಇಷ್ಟೊಂದು ದೊಡ್ಡ ಪಾದಯಾತ್ರೆಗೂ ಇವರ ತಲೆ ಕೆಡಿಸಿಕೊಳ್ಳಲಿಲ್ಲ. ನಮ್ಮರಾಜ್ಯದ ಜನರಿಗಾದರೂ ಗೊತ್ತಾಯಿತಲ್ಲ ಸಕ್ಕರೆ ಸಚಿವ ಪ್ರಹ್ಲಾದ ಜೋಶಿ ಅವರು ನಮ್ಮ ರಾಜ್ಯದವರು ಎಂಬುದು. ನಮ್ಮವರೇ ಮಾಡುತ್ತಿಲ್ಲ ಎಂಬುದು ಜನರಿಗೆ ಗೊತ್ತಾಯಿತು. ಈಗಲಾದರೂ ಪ್ರಹ್ಲಾದ್ ಜೋಶಿ ಅವರು ಮಾಡಲಿ ಎಂಬುದು ನಮ್ಮ ಒತ್ತಾಯ ಎಂದರು.
ತೆಲಾಂಗಣಕ್ಕೆ ಆಲಮಟ್ಟಿಯ ಕೃಷ್ಣಾ ನದಿ ನೀರು ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಬಾರಿ ಪ್ರಕೃತಿ ಯಾರಿಗೂ ಒಲಿದಿಲ್ಲ. ಕುಡಿಯುವ ನೀರಿನ ವಿಷಯ ಬಂದಾಗ ಅವರು ನಮಗೆ ಕೊಡುತ್ತಾರೆ, ನಾವು ಅವರಿಗೆ ಕೊಡುತ್ತೇವೆ. ಆದರೆ ಈ ಬಾರಿ ಭೀಕರ ಬರಗಾಲ ಇರೋದ್ರಿಂದ ಸ್ವಲ್ಪ ರೈತರ ಪ್ರತಿರೋಧ ಇದ್ದೇ ಇರುತ್ತೆ. ಆದರೆ ಕುಡಿಯಲು ನೀರು ಅವರು ನಮಗೆ ಕೊಡಬೇಕು, ನಾವು ಅವರಿಗೆ ಕೊಡಬೇಕು ಅನ್ನೋದು ನನ್ನ ಅಭಿಲಾಷೆ, ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.
ಇದನ್ನೂ ಓದಿ:
ಆಲಮಟ್ಟಿ ಜಲಾಶಯದ ಎತ್ತರ ವಿಚಾರ ಬಗ್ಗೆ, ನೋಡಿ ಈಗಲಾದ್ರೂ ಪ್ರಧಾನಮಂತ್ರಿಗಳು ಮೌನ ಮುರಿಬೇಕು. ಮೋದಿ ಮೌನಾಚರಣೆ ಯಾವ ಮಟ್ಟಕ್ಕಿದೆ ಅಂದರೆ ದಕ್ಷಿಣ ಭಾರತದಲ್ಲಿ ಪ್ರವಾಹ ಬಂದರೂ ಇಲ್ಲ, ಬರಗಾಲ ಬಂದರೂ ಇಲ್ಲ.
ದಕ್ಷಿಣದಲ್ಲಿ ಯಾವ ರಾಜ್ಯಕ್ಕೆ ಬಂದು ಇಷ್ಟೊಂದು ಭೀಕರ ಬರಗಾಲ ಬಂದಾಗ ಬಂದಿದ್ದಾರೆ. ಒಂದು ಬರ ಅಧ್ಯನ ತಂಡ ಕಳಿಸಲು ಮೂರು ತಿಂಗಳು ತಗೆದುಕೊಂಡಿದ್ದಾರೆ. ಮುಂಗಾರಿ ಕೂಡ ಸಂಫೂರ್ಣ ಹೊಯ್ತು, ಹಿಂಗಾರಿ ಕೂಡ ಹೋಗುತ್ತಿದೆ. ಈ ಪರಿಸ್ಥಿತಿಯಲ್ಲಿ ಪ್ರಧಾನಿಗಳು ಮಧ್ಯಸ್ಥಿಕೆ ವಹಿಸಿ ಏನು ಪರಿಸ್ಥಿತಿ ಇದೆ ಅವಲೋಕನ ಮಾಡಲಿ ಎಂದರು.



