ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮುವಿನ ಸಿದ್ರಾ ಪ್ರದೇಶದಲ್ಲಿ ಬೆಳಗ್ಗೆ ಉಗ್ರರು ಅಡಗಿರುವ ಮಾಹಿತಿ ಮೇರೆಗೆ ಎನ್‌ಕೌಂಟರ್ ಆರಂಭವಾಗಿತ್ತು.
ಇದೀಗ ಸೇನಾಪಡೆ ಮೂವರು ಉಗ್ರರನ್ನು ಹತ್ಯೆ ಮಾಡಿದೆ ಎಂದು ಎಜಿಡಿಪಿ ಮುಕೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಹೆದ್ದಾರಿಯಲ್ಲಿ ಲಾರಿಯ ಸಂಚಾರ ಅನುಮಾನಾಸ್ಪದವಾಗಿ ಕಾಣಿಸಿತ್ತು. ಲಾರಿಯನ್ನು ಕೂಡಲೇ ಹಿಂಬಾಲಿಸಿದ್ದೆವು. ಸಿದ್ರಾದಲ್ಲಿ ಲಾರಿ ನಿಂತಿತ್ತು. ಲಾರಿ ನಿಲ್ಲಿಸಿ ಚಾಲಕ ಪರಾರಿಯಾದ. ಲಾರಿಯನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಿದಾಗ ಉಗ್ರರು ಅಡಗಿರುವುದು ಕಾಣಿಸಿತ್ತು.
ಅವರು ತಕ್ಷಣವೇ ಫೈರಿಂಗ್ ಆರಂಭಿಸಿದರು. ಭದ್ರತಾ ಪಡೆಗಳು ಗುಂಡಿನ ದಾಳಿ ಆರಂಭಿಸಿದ್ದು, ಸೇನೆ ಗುಂಡಿಗೆ ಉಗ್ರರು ಹತ್ಯೆಯಾಗಿದ್ದಾರೆ. ಉಗ್ರರ ಬಳಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳಿದ್ದವು. ಎಂದಿದ್ದಾರೆ.