ಯುರೋಪ್‌ನಲ್ಲಿ ಶೀಘ್ರವೇ ಕೋವಿಡ್ ಅಂತ್ಯ: ಡಬ್ಲ್ಯುಎಚ್‌ಒ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಮಿಕ್ರಾನ್ ದಾಳಿಗೆ ಯುರೋಪ್ ತತ್ತರಿಸಿದ್ದು,ಇನ್ನೇನು ಸ್ವಲ್ಪ ಸಮಯದಲ್ಲಿ ಒಮಿಕ್ರಾನ್ ಅಂತ್ಯ ಕಾಣಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲೂಗ್ ಹೇಳಿದ್ದಾರೆ.

ಯುರೋಪ್‌ನಲ್ಲಿ ಸಾಂಕ್ರಾಮಿಕ ಅಂತ್ಯದತ್ತ ಸಾಗುತ್ತಿದೆ. ಮಾರ್ಚ್‌ನಲ್ಲಿ ಶೇ.60ರಷ್ಟು ಮಂದಿಗೆ ಒಮಿಕ್ರಾನ್ ಬಾಧಿಸಬಹುದು ಎಂದು ಅಂದಾಜಿಸಲಾಗಿದೆ. ಯುರೋಪ್‌ನಲ್ಲಿ ಕೋವಿಡ್ ಉಲ್ಬಣ ಕಡಿಮೆಯಾದ ನಂತರ ಕೆಲವು ತಿಂಗಳು ಎಲ್ಲವೂ ಶಾಂತವಾಗಿ ಇರಲಿದೆ. ಆದರೆ ಇದರರ್ಥ ಕೋವಿಡ್ ಮರುಕಳಿಸುವುದು ಎಂದಲ್ಲ ಎಂದು ಹೇಳಿದ್ದಾರೆ.

ಈ ವಾರ ಕೋವಿಡ್ ಪ್ರಕರಣಗಳು ಕಡಿಮೆಯಾಗಿವೆ, ಹೀಗೆಯೇ ಕಡಿಮೆಯಾಗುತ್ತಾ ಬಂದರೆ ಶೀಘ್ರವೇ ಕೋವಿಡ್‌ನಿಂದ ಮುಕ್ತಿ ಹೊಂದಬಹುದು. ಈಗಲೂ ಕೋವಿಡ್ ಮಾರಣಾಂತಿಕ. ಅದರ ಬಗ್ಗೆ ಜಾಗರೂಕತೆ ಅತ್ಯಾವಶ್ಯವಾಗಿದೆ. ಸಾಂಕ್ರಾಮಿಕ ರೋಗಗಳ ಕೊನೆ ಅನಿಶ್ಚಿತ. ಕೊರೋನಾ ಎಲ್ಲ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಇನ್ನೇನು ಮುಗಿಯಿತು ಎನ್ನುವಾಗ ಹೊಸ ತಳಿ ಹುಟ್ಟಬಹುದು ಎಂದಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!