ಡೆಲ್ಟಾಗಿಂತಲೂ ವೇಗವಾಗಿ ಹರಡುತ್ತಿದೆ ಒಮಿಕ್ರಾನ್:‌ ವಿಶ್ವದ 171 ರಾಷ್ಟ್ರಗಳಲ್ಲಿ ಹಬ್ಬಿದ ಸೋಂಕು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ನ ರೂಪಾಂತರಿ ಸೋಂಕು ಒಮಿಕ್ರಾನ್‌ ಈಗ ವಿಶ್ವದ 171 ರಾಷ್ಟ್ರಗಳಿಗೆ ಹಬ್ಬಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಪತ್ತೆಯಾದ ಒಮಿಕ್ರಾನ್ ಶೀಘ್ರದಲ್ಲಿ ಡೆಲ್ಟಾಕ್ಕಿಂತ ವೇಗವಾಗಿ ಜಾಗತಿಕ ಮಟ್ಟದಲ್ಲಿ ಆವರಿಸಿಕೊಳ್ಳಲಿದೆ ಎಂದಿದೆ.
ಡೆಲ್ಟಾಗೆ ಹೋಲಿಸಿದರೆ ಒಮಿಕ್ರಾನ್‌ ಹರಡುವ ವೇಗ ಹೆಚ್ಚಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ ಕೂಡ ಅಧಿಕವಾಗಿದೆ. ಜ.20ರವೇಳೆಗೆ ಒಮಿಕ್ರಾನ್‌ ಸೋಂಕು 171 ದೇಶಗಳಲ್ಲಿ ಪತ್ತೆಯಾಗಿದ್ದು, ಇದು ಡೆಲ್ಟಾದ ವೇಗವನ್ನು ಮೀರಿಸಲಿದೆ.
ಒಮಿಕ್ರಾನ್‌ ನಿಂದ ಅಪಾಯ ಕಡಿಮೆ ಇದ್ದರೂ ಕೂಡ ಬೇರೆ ಎಲ್ಲಾ ಸಾರ್ಸ್‌ ರೂಪಾಂತರಿಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಹೆಚ್ಚಾಗಿದೆ ಎಂದು ತಿಳಿಸಿದೆ.
ಭಾರತ, ದಕ್ಷಿಣ ಆಫ್ರಿಕಾ, ಯುಕೆ ಸೇರಿ ಹಲವು ರಾಷ್ಟ್ರಗಳಲ್ಲಿ ಬಿಎ-2 ವಂಶಾವಳಿಯ ಒಮಿಕ್ರಾನ್‌ ಕಾಣಿಸುತ್ತಿದ್ದು, ಇದರ ಬಗ್ಗೆ ವಿಶ್ವ ಸಂಸ್ಥೆ ಅಧ್ಯಯನ ನಡೆಸುತ್ತಿದೆ. ಈ ಒಮಿಕ್ರಾನ್‌ ಸೋಂಕು ಕೂಡ ಮನುಷ್ಯರ ಶ್ವಾಸಕೋಶದ ಮೇಲೆ ಹೆಚ್ಚು ಪರಿಣಾಮಕಾರಿಯಾಗಿರಲಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!