September 17, 2026
Thursday, September 17, 2026
spot_img

76ರ ಹರೆಯದಲ್ಲೂ ಇಪ್ಪತ್ತರ ಎನರ್ಜಿ! ಪ್ರಧಾನಿ ಮೋದಿ ಫಾಲೋ ಮಾಡೋ 5 ವೆಲ್‌ನೆಸ್ ಹ್ಯಾಬಿಟ್ಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈಗ 76 ವರುಷ ವಯಸ್ಸು. ಆದರೆ ಅವರಲ್ಲಿರೋ ಎನರ್ಜಿ ನೋಡಿದ್ರೆ ಇಪ್ಪತ್ತರ ಹರಯದ ಹುಡುಗರೂ ಕೂಡ ಬೆರಗಾಗಬೇಕು. ವಯಸ್ಸು ಎಷ್ಟೇ ಆದ್ರೂ ದಿನಕ್ಕೆ 18 ಗಂಟೆ ಕೆಲಸ, ಪ್ರವಾಸ, ಭಾಷಣ, ಸಭೆ-ಸಮಾರಂಭ ಎಂದು ಫುಲ್ ಆಕ್ಟಿವ್ ಆಗಿ ಇರ್ತಾರೆ. ಇಷ್ಟೊಂದು ಫಿಟ್ ಆಗಿ ಇರೋಕೆ ಮೋದಿ ಅವರ ಸೀಕ್ರೆಟ್ ಮಂತ್ರ ಏನು ಗೊತ್ತಾ? ಅವರು ಸತತವಾಗಿ ಪಾಲಿಸಿಕೊಂಡು ಬಂದಿರೋ 5 ಹೆಲ್ತಿ ಲೈಫ್‌ಸ್ಟೈಲ್ ಹ್ಯಾಬಿಟ್ಸ್.

ಯೋಗ ಮತ್ತು ಪ್ರಾಣಾಯಾಮ

ಮೋದಿ ಅವರ ದಿನ ಶುರುವಾಗೋದೇ ಯೋಗದಿಂದ. ಎಷ್ಟೇ ಕೆಲಸ ಇರಲಿ, ಎಷ್ಟೇ ಪ್ರವಾಸದಲ್ಲಿರಲಿ ಬೆಳಿಗ್ಗೆ ಸುಮಾರು 40 ನಿಮಿಷಗಳ ಕಾಲ ಯೋಗ, ಸೂರ್ಯನಮಸ್ಕಾರ ಮತ್ತು ಪ್ರಾಣಾಯಾಮ ಮಾಡೋದನ್ನು ಅವರು ಎಂದಿಗೂ ಮರೆಯಲ್ಲ. ಇದು ಅವರ ದೇಹಕ್ಕೆ ಎನರ್ಜಿ ಕೊಡೋದಲ್ಲದೆ ಮನಸ್ಸನ್ನು ಫುಲ್ ಕೂಲ್ ಆಗಿಡುತ್ತೆ.

ಕಟ್ಟುನಿಟ್ಟಿನ ಡಯಟ್

ಕಳೆದ ಹಲವು ದಶಕಗಳಿಂದಲೂ ಮೋದಿ ಅವರು ನವರಾತ್ರಿ ಮುಂತಾದ ಹಬ್ಬಗಳ ಸಮಯದಲ್ಲಿ ಕಟ್ಟುನಿಟ್ಟಾಗಿ ಉಪವಾಸ ಮಾಡಿಕೊಂಡು ಬಂದಿದ್ದಾರೆ. 9 ದಿನಗಳ ಕಾಲ ಬರೀ ನೀರು ಅಥವಾ ಲಿಕ್ವಿಡ್ ಡಯಟ್‌ನಲ್ಲೇ ಇರ್ತಾರೆ. ಇದು ಅವರ ದೇಹಕ್ಕೆ ಡಿಟಾಕ್ಸ್ ತರ ಕೆಲಸ ಮಾಡಿ, ಜೀರ್ಣಾಂಗ ವ್ಯವಸ್ಥೆಯನ್ನು ಸದಾ ಹೆಲ್ದಿಯಾಗಿಡುತ್ತದೆ.

ಕೇವಲ 3.5 ರಿಂದ 4 ಗಂಟೆ ನಿದ್ರೆ

ಸಾಮಾನ್ಯವಾಗಿ ಎಲ್ಲರಿಗೂ 7-8 ಗಂಟೆ ನಿದ್ರೆ ಬೇಕು ಅಂತಾರೆ, ಆದ್ರೆ ಮೋದಿ ಅವರು ಕೇವಲ 3.5 ರಿಂದ 4 ಗಂಟೆ ಮಾತ್ರ ನಿದ್ದೆ ಮಾಡ್ತಾರೆ. ಕನಿಷ್ಠ ನಿದ್ರೆ ಮಾಡಿದರೂ ದೀರ್ಘ ಉಸಿರಾಟದ ವ್ಯಾಯಾಮ ಮತ್ತು ಧ್ಯಾನದ ಮೂಲಕ ದೇಹ ಹಾಗೂ ಮನಸ್ಸನ್ನು ತಕ್ಷಣ ರೀಚಾರ್ಜ್ ಮಾಡಿಕೊಳ್ಳುತ್ತಾರೆ.

ಆಯುರ್ವೇದ ಪಾಲನೆ

ಸದಾ ಗಂಟಲು ಸರಿ ಇರಲಿ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿರಲಿ ಎಂದು ಮೋದಿ ಅವರು ದಿನವಿಡೀ ಉಗುರುಬೆಚ್ಚಗಿನ ನೀರನ್ನೇ ಕುಡಿಯುತ್ತಾರೆ. ಜೊತೆಗೆ ಆಯುರ್ವೇದ ಕಷಾಯ ಮತ್ತು ಮನೆಮದ್ದುಗಳನ್ನು ಬಳಸೋದು ಅವರ ಹೆಲ್ತ್ ಸೀಕ್ರೆಟ್ಸ್‌ನಲ್ಲಿ ಪ್ರಮುಖವಾದದ್ದು.

ಸಿಂಪಲ್ ಆಹಾರ

ಆಹಾರದ ವಿಚಾರದಲ್ಲಿ ಮೋದಿ ಫುಲ್ ಸಿಂಪಲ್. ಕಟ್ಟುನಿಟ್ಟಿನ ಸಸ್ಯಾಹಾರಿಯಾದ ಇವರು ಎಣ್ಣೆ, ಖಾರ ಕಡಿಮೆ ಇರುವ ಸಾತ್ವಿಕ ಊಟವನ್ನಷ್ಟೇ ಮಾಡ್ತಾರೆ. ರಾಗಿ, ಜೋಳದಂತಹ ಸಿರಿಧಾನ್ಯಗಳು, ಸೀಸನಲ್ ಹಣ್ಣುಗಳು, ನುಗ್ಗೆಕಾಯಿ ಪರೋಟ ಮತ್ತು ಗುಜರಾತಿ ಕಿಚಡಿ ಅಂದ್ರೆ ಇಷ್ಟ. ಸಂಜೆ 6 ಗಂಟೆ ಅಥವಾ ಸೂರ್ಯ ಮುಳುಗಿದ ಮೇಲೆ ಇವರು ಊಟ ಮಾಡೋದೇ ಇಲ್ಲ.

ಒಟ್ಟಿನಲ್ಲಿ, ಯಾವುದೇ ದುಬಾರಿ ಜಿಮ್‌ಗಳಿಗಿಂತ ನಮ್ಮ ಸಾಂಪ್ರದಾಯಿಕ ಆಹಾರ ಶೈಲಿ, ಯೋಗ ಮತ್ತು ಶಿಸ್ತಿನ ಜೀವನವೇ ಮೋದಿಯವರ ಈ 76ರ ಹರೆಯದ ಫಿಟ್ನೆಸ್ ಸೂತ್ರ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !