ಆತಿಥೇಯ ಪಾಕ್‌ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಇಂಗ್ಲೆಂಡ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬರೋಬ್ಬರಿ 17 ವರ್ಷಗಳ ಬಳಿಕ ಪಾಕಿಸ್ತಾನ ನೆಲಕ್ಕೆ ಕಾಲಿಟ್ಟಿರುವ ಇಂಗ್ಲೆಂಡ್‌ ಮೊದಲ ಪಂದ್ಯದಲ್ಲೇ ಪಾಕ್‌ ತಂಡವನ್ನು 6 ವಿಕೆಟ್‌ ಗಳಿಂದ ಮಣಿಸುವ ಮೂಲಕ ಶುಭಾರಂಭ ಮಾಡಿದೆ.
ಕರಾಚಿಯಲ್ಲಿ ನಡೆದ 7 ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ಮೊಹಮ್ಮದ್ ರಿಜ್ವಾನ್ ಅರ್ಧಶತಕದ ಬಲದಿಂದ(46 ಎಸೆತಗಳಲ್ಲಿ 68) ದ ಬಲದಿಂದ ನಿಗದಿತ 20 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 158 ರನ್‌ ಗಳ ಸಾಧಾರಣ ಮೊತ್ತವನ್ನು ಕಲೆಹಾಕಿತು.
ಇಂಗ್ಲೆಂಡ್‌ ಪರ ಸ್ಪಿನ್ನರ್ ಆದಿಲ್ ರಶೀದ್ (4 ಓವರ್‌ಗಳಲ್ಲಿ 27 ಕ್ಕೆ 2) ಮತ್ತು ವೇಗಿ ಲ್ಯೂಕ್ ವುಡ್ (4 ಓವರ್‌ಗಳಲ್ಲಿ 24 ಕ್ಕೆ 3) ಮಾರಕ ದಾಳಿ ನಡೆಸಿದರು.
ಗುರಿ ಬೆನ್ನತ್ತಿದ ಇಂಗೆಂಡ್‌ಗೆ ಅಲೆಕ್ಸ್ ಹೇಲ್ಸ್ ಆಸರೆಯಾದರು. ಸುಮಾರು 2 ತಿಂಗಳುಗಳ ಬಳಿಕ ತಂಡಕ್ಕೆ ಕಮ್‌ ಬ್ಯಾಕ್‌ ಮಾಡಿದ ಹೇಲ್ಸ್‌ ಮೊದಲ ಪಂದ್ಯದಲ್ಲೇ ಅರ್ಧಶತಕ( 40 ಎಸೆತಗಳಲ್ಲಿ 53 ರನ್) ಸಿಡಿಸಿ ಮಿಂಚಿದರು.  ಹ್ಯಾರಿ ಬ್ರೂಕ್ ಕೂಡ 25 ಎಸೆತಗಳಲ್ಲಿ 42 ರನ್ ಗಳಿಸಿ ಅವರಿಗೆ ಸಾಥ್‌ ನೀಡಿದರು. ಪಾಕ್‌ ನೀಡಿದ ಗುರಿಯನ್ನು ನಿರಾಯಾಸವಾಗಿ ಬೆನ್ನತ್ತಿದ ಇಂಗ್ಲೆಂಡ್‌ 4 ವಿಕೆಟ್‌ ನಷ್ಟಕ್ಕೆ 159 ರನ್‌ಗಳನ್ನು ಬೆನ್ನಟ್ಟಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!