ಹೊಟೇಲ್‌ನಲ್ಲಿ ಪ್ರಿಯತಮೆಯೊಂದಿಗೆ ಪತಿಯ ರಾಸಲೀಲೆ: ಇಬ್ಬರಿಗೂ ಚಳಿ ಬಿಡಿಸಿದ ಪತ್ನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ದೆಹಲಿ ಗೇಟ್‌ ರೈಲ್ವೇ ನಿಲ್ದಾಣದ ಬಳಿಯಿರುವ ಹೋಟೆಲ್‌ನಲ್ಲಿ ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗಿರುವ ವಿಚಾರ ತಿಳಿದು ಸ್ಥಳಕ್ಕೆ ತೆರಳಿ ಇಬ್ಬರನ್ನೂ ಒಟ್ಟೆ ಒಗೆದಂತೆ ಒಗೆದಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗ್ರಾದ ಈ ದಂಪತಿ 16 ವರ್ಷಗಳ ಹಿಂದೆ ವಿವಾಹವಾಗಿದ್ದರು. ಇವರಿಬ್ಬರಿಗೆ ಇಬ್ಬರು ಮಕ್ಕಳು ಕೂಡ ಇದಾರೆ. ಆದರೂ ಈತ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಈ ವಿಚಾರ ತಿಳಿದ ಪತ್ನಿಗೆ ಹಲವು ಬಾರಿ ಗಂಡನಿಗೆ ವಾರ್ನಿಂಗ್‌ ಕೊಟ್ಟರೂ ಬುದ್ದಿ ತಂದುಕೊಳ್ಳದೆ ಮುಂದುವರಿದಿದ್ದಾನೆ.

ಕೊನೆಗೆ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯುವಂತೆ ಸಂಬಂಧಿಕರಿಗೆ ತಿಳಿಸಿ ಸೋಮವಾರ ರಾತ್ರಿ ಪತಿ ತನ್ನ ಗೆಳತಿಯೊಂದಿಗೆ ರಾಜಮಂಡಿ ರೈಲು ನಿಲ್ದಾಣ ರಸ್ತೆಯಲ್ಲಿರುವ ಹೋಟೆಲ್‌ಗೆ ಬಂದಿರುವ ಬಗ್ಗೆ ಪತ್ನಿಗೆ ಮಾಹಿತಿ ಲಭಿಸಿದೆ. ನೇರವಾಗಿ ಹೊಟೇಲ್ ರೂಮಿಗೆ ನುಗ್ಗಿದ ಪತ್ನಿ ಇಬ್ಬರನ್ನು ತನ್ನ ಚಪ್ಪಲಿಯಿಂದ ಹಿಗ್ಗಾಮುಗ್ಗ ಹೊಡೆದಿದ್ದಾಳೆ. ನನ್ನನ್ನು ಕ್ಷಮಿಸು ಎಂದು ಕೈ ಮುಗಿದು ಬೇಡಿಕೊಂಡರೂ ಬಿಡದ ಆಕೆ ಇಬ್ಬರನ್ನೂ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಘಟನೆಯ ವಿಡಿಯೋ ಮಂಗಳವಾರ ವಿವಿಧ ವಾಟ್ಸಾಪ್ ಗ್ರೂಪ್‌ಗಳಲ್ಲಿ ಶೇರ ಆಗಿ, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!