15 ವರ್ಷಗಳ ಬಳಿಕ ನ್ಯೂಜಿಲ್ಯಾಂಡ್ ನೆಲದಲ್ಲಿ ಟೆಸ್ಟ್ ಗೆದ್ದ ಇಂಗ್ಲೆಂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನ್ಯೂಜಿಲ್ಯಾಂಡ್(ENG VS NZ)​ ವಿರುದ್ಧದ ಮೊದಲ ಪಿಂಕ್​ ಬಾಲ್​ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ 267 ರನ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಕಿವೀಸ್‌ ನೆಲದಲ್ಲಿ ಬರೋಬ್ಬರಿ 15 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇತಿಹಾಸ ನಿರ್ಮಿಸಿದೆ .

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಇಂಗ್ಲೆಂಡ್​ ಮೊದಲ ಇನಿಂಗ್ಸ್​ನಲ್ಲಿ 9 ವಿಕೆಟ್​ಗೆ 325 ರನ್​ ಗಳಿಸಿ ಡಿಕ್ಲೇರ್​ ಮಾಡಿತು. ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್​ 306 ರನ್ ಗಳಿಸಿ ಆಲೌಟ್​ ಆಯಿತು. 19 ರನ್​ಗಳ ಲೀಡ್​ ಪಡೆದ ಇಂಗ್ಲೆಂಡ್​ ದ್ವಿತೀಯ ಇನಿಂಗ್ಸ್​ನಲ್ಲಿ 374 ರನ್​ಗಳಿಸಿ ಸರ್ವಪತನ ಕಂಡಿತು.

393 ರನ್​ ಗೆಲುವಿನ ಗುರಿ ಪಡೆದ ನ್ಯೂಜಿಲ್ಯಾಂಡ್​​ ಪಂದ್ಯದ ನಾಲ್ಕನೇ ದಿನ ಭಾನುವಾರ (ಫೆ.19) ವೇಗಿಗಳಾದ ಸ್ಟುವರ್ಟ್‌ ಬ್ರಾಡ್‌ ಮತ್ತು ಜೇಮ್ಸ್‌ ಆಂಡರ್ಸನ್‌ ಅವರ ದಾಳಿಗೆ ಕುಸಿದು 126 ರನ್​ಗೆ ಆಲೌಟ್​ ಆಗುವ ಮೂಲಕ ಹೀನಾಯ ಸೋಲು ಕಂಡಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!