ರಣಜಿ ಟ್ರೋಫಿ ಫೈನಲ್: ಬಂಗಾಳ ವಿರುದ್ಧ ಗೆದ್ದ ಸೌರಾಷ್ಟ್ರ ಚಾಂಪಿಯನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ರಣಜಿ ಟ್ರೋಫಿ ಫೈನಲ್(Ranji Trophy Final)​ ಪಂದ್ಯದಲ್ಲಿ ಬಂಗಾಳ ಸೌರಾಷ್ಟ್ರ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿದೆ.

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಜೈದೇವ್‌ ಉನಾದ್ಕತ್ ಬಳಗ ಮೊದಲ ಇನಿಂಗ್ಸ್‌ನಲ್ಲಿ 230 ರನ್‌ಗಳ ಮುನ್ನಡೆ ಪಡೆಯಿತು. ಮೂರನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ ಬಂಗಾಳ ಎರಡನೇ ಇನಿಂಗ್ಸ್‌ನಲ್ಲಿ 4 ವಿಕೆಟ್‌ ನಷ್ಟಕ್ಕೆ 169 ರನ್ ಗಳಿಸಿ 61 ರನ್‌ಗಳಿಂದ ಹಿನ್ನಡೆಯಲ್ಲಿತ್ತು. ಭಾನುವಾರ ನಾಲ್ಕನೇ ದಿನದಾಟ ಮುಂದುವರಿಸಿದ ಬಂಗಾಲ 241 ರನ್​ಗೆ ಆಲೌಟ್​ ಆಗುವ ಮೂಲಕ 10 ರನ್​ಗಳ ಮುನ್ನಡೆ ಸಾಧಿಸಿತು. ಗೆಲುವಿಗೆ 11 ರನ್​ ಗುರಿ ಪಡೆದ ಸೌರಾಷ್ಟ್ರ 1 ವಿಕೆಟ್​ ನಷ್ಟಕ್ಕೆ 14 ರನ್​ ಪೇರಿಸಿ ಗೆಲುವು ದಾಖಲಿಸಿ 2ನೇ ಬಾರಿಗೆ ಪ್ರಶಸ್ತಿ ಗೆದ್ದುಕೊಂಡ ಸಾಧನೆ ಮಾಡಿತು.

ಸೌರಾಷ್ಟ್ರ ಮೊದಲ ಇನಿಂಗ್ಸ್​ನಲ್ಲಿ ಬರೋಬ್ಬರಿ 404 ರನ್​ ಪೇರಿಸಿತ್ತು. ಪಂದ್ಯದಲ್ಲಿ ಒಟ್ಟು 9 ವಿಕೆಟ್​ ಪಡೆದ ನಾಯಕ ಜೈದೇವ್​ ಉನಾದ್ಕತ್​ ಪ್ರಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!