ಇಂಗ್ಲಿಷ್ ಕಂಡ್ರೆ ಭಯಾನಾ? ಇಂಗ್ಲಿಷ್ ಕಲಿಯೋಕೆ ಸಹಾಯವಾಗೋ ಟಿಪ್ಸ್ ಇಲ್ಲಿದೆ..

ಈಗಲೂ ಎಷ್ಟೋ ಮಂದಿಗೆ ಇಂಗ್ಲಿಷ್ ತುಂಬಾನೇ ಕಷ್ಟ. ಬರಿಯೋಕೆ ಸುಲಭ ಎನಿಸಿದರೂ ಮಾತನಾಡೋಕೆ ತುಂಬಾನೇ ಕಷ್ಟ ಎನಿಸುತ್ತದೆ. ಇಂಗ್ಲಿಷ್ ಕಲಿಯೋದು ಕಬ್ಬಿಣದ ಕಡಲೆಯೇನಲ್ಲ. ಆದರೆ ನಾವು ಅದನ್ನು ಹಾಗೆ ಮಾಡಿಕೊಂಡಿದ್ದೇವೆ ಅಷ್ಟೆ. ಇಂಗ್ಲಿಷ್ ಕಲಿಯೋಕೆ ಈಸಿ ಟಿಪ್ಸ್ ಇಲ್ಲಿದೆ..

  • ಸಿಕ್ಕಿದ್ದನ್ನೆಲ್ಲಾ ಓದಿ, ಇಂಗ್ಲಿಷ್‌ನಲ್ಲಿ ಏನೇ ಕಾಣಿಸಿದರೂ ಅದನ್ನು ಓದೋಕೆ ಟ್ರೈ ಮಾಡಿ.
  • ಅರ್ಥವಾಗದಿದ್ದರೂ, ಸ್ವಲ್ಪ ಅರ್ಥವಾದರೂ ಇಂಗ್ಲಿಷ್ ಲೇಖನಗಳನ್ನ ಓದಿ. ದಿನವೂ ಒಂದು ಲೇಖನ ಓದಿ ಸಾಕು.
  • ಇಂಗ್ಲಿಷ್ ಸಿನಿಮಾ ಅಥವಾ ಸೀರೀಸ್ ನೋಡುವ ಅಭ್ಯಾಸ ಮಾಡಿ. ಸಬ್‌ಟೈಟಲ್ಸ್‌ಗಳ ಕಡೆ ಗಮನ ಕೊಡಿ. ಇಂಗ್ಲಿಷ್ ಜೊತೆಗೆ ಟ್ರೆಂಡ್ ಕೂಡ ತಿಳಿಯುತ್ತದೆ.
  • ತಪ್ಪಾದರೂ ಪರವಾಗಿಲ್ಲ. ಇಂಗ್ಲಿಷ್‌ನಲ್ಲಿಯೇ ಮಾತನಾಡಿ, ತಪ್ಪಿನಿಂದ ಕಲಿಕೆ ಸಾಧ್ಯ.
  • ದಿನಕ್ಕೆ ಐದು ಹೊಸ ಪದ ಕಲಿಯಿರಿ. ನಿನ್ನೆ ಕಲಿತ ಪದಗಳನ್ನು ರಿವೈಸ್ ಮಾಡಿ. ಅದನ್ನು ಮಾತನಾಡುವಾಗ ಬಳಕೆ ಮಾಡಿ.
  • ಇಂಗ್ಲಿಷ್ ಕಲಿಯೋದಕ್ಕೆ ಓದಿರಲೇಬೇಕು ಎಂದೇನಿಲ್ಲ. ಎಷ್ಟೋ ಗಣ್ಯರು ಶಾಲೆ ಮೆಟ್ಟಿಲಷ್ಟೇ ಹತ್ತಿ ಸರಾಗವಾಗಿ ಇಂಗ್ಲಿಷ್ ಮಾತನಾಡುತ್ತಾರೆ. ಅಂತವರನ್ನು ನೋಡಿ ಕಲಿಯಿರಿ.
  • ಗ್ರಾಮರ್ ನೂರಕ್ಕೆ ನೂರರಷ್ಟು ಸರಿಯಾಗಿಯೇ ಇರಬೇಕು ಅನ್ನೋದನ್ನು ಮನಸ್ಸಿನಿಂದ ತೆಗೆಯಿರಿ. ನೀವು ಮಾತನಾಡಿದ್ದು ಎದುರಿನವರಿಗೆ ಅರ್ಥವಾದರೆ ಸಾಕು.
  • ಈಜು ಅರ್ಧಬರ್ಧ ಕಲಿತರೂ ಪರವಾಗಿಲ್ಲ ಒಮ್ಮೆ ನೀರಿಗೆ ಇಳಿಯಿರಿ. ಯಾವುದಾದರೂ ಫಾರೀನ್ ದೇಶಕ್ಕೆ ಹೋಗಿ ಬನ್ನಿ.
  • ಇಂಗ್ಲಿಷ್ ಬಗ್ಗೆ ಮೊದಲು ಭಯ ಬಿಡಿ. ಇದೂ ಒಂದು ಭಾಷೆ ಅಷ್ಟೆ ಅನ್ನೋದನ್ನು ಮನಸ್ಸಿನಲ್ಲಿ ಗಟ್ಟಿಮಾಡಿಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!