Friday, June 2, 2023

Latest Posts

ವಿವೇಕಾನಂದರ ಜಯಂತಿ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಮರ್ಥ ಭಾರತ ಪ್ರಬಂಧ ಸ್ಪರ್ಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜ.12 ವಿಶ್ವ ಕಂಡ ಶ್ರೇಷ್ಠ ಸಂತ ಸ್ವಾಮಿ ವಿವೇಕಾನಂದರ 159ನೇ ಜಯಂತಿ. ಇದರ ಅಂಗವಾಗಿ ʼಸಮರ್ಥ ಭಾರತʼ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಕಾರ್ಯಕ್ರಮ ಆಯೋಜಿಸಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಬಿ ಗುಡ್‌ ಡು ಗುಡ್‌ ಅಭಿಯಾನದ ಅಡಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಆಯೋಜಿಸಿದೆ.
ʼಸ್ವಾತಂತ್ರ್ಯ ಸಂಗ್ರಾಮದ ಮೇಲೆ ಸ್ವಾಮಿ ವಿವೇಕಾನಂದರ ವಿಚಾರಗಳ ಪ್ರಭಾವʼಎನ್ನುವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ.

ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಆಸಕ್ತರಿರುವರಿಗೆ:

ಈ ಸ್ಪರ್ಧೆಯಲ್ಲಿ ಪದವಿ ಯಾ ತತ್ಸಮಾನ, ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಬಹುದು.
ಮೇಲೆ ತಿಳಿಸಿದ ವಿಷಯದ ಬಗ್ಗೆ ಕನ್ನಡ ಅಥವಾ ಇಂಗ್ಲಿಷ್‌ ನಲ್ಲಿ 2500 ಪದಗಳ ಮಿತಿಯಲ್ಲಿ ಪ್ರಬಂಧ ಸ್ವಹಸ್ತಾಕ್ಷರದಲ್ಲಿ ಬರೆದು ಕಳುಹಿಸಬೇಕು. ಇನ್ನು ಅಭ್ಯರ್ಥಿಗಳು ತಮ್ಮ ಕಾಲೇಜಿನ ಪ್ರಾಂಶುಪಾಲರಿಂದ ಅಥವಾ ವಿಭಾಗದ ಮುಖ್ಯಸ್ಥರಿಂದ ವ್ಯಾಸಂಗ ಪ್ರಮಾಣ ಪತ್ರವನ್ನು ಜತೆಗಿರಿಸಬೇಕು.
ಪ್ರಬಂಧ ಬರೆದು ಕಳುಹಿಸಲು ಕೊನೆಯ ದಿನಾಂಕ: 31-01-2022.
ವಿಳಾಸ: ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ, ಮಿಥಿಕ್‌ ಸೊಸೈಟಿ ನೃಪತುಂಗ ರಸ್ತೆ, ಕೆ. ಆರ್.‌ ವೃತ್ತ ಬಳಿ, ಬೆಂಗಳೂರು 01 ಕ್ಕೆ ಕಳುಹಿಸಬೇಕಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!