ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ
ನೇರಳೆ ಬಣ್ಣದ ಬದನೆ – ಅರ್ಧಕಿಲೋ,
ಮಸಾಲೆ ಪುಡಿ -ನೂರು ಗ್ರಾಂ,
ಶುದ್ಧ ತೆಂಗಿನೆಣ್ಣೆ -ಕಾಲು ಲೀಟರ್,
ಒಂದು ನಿಂಬೆ ಹಣ್ಣು,
ರುಚಿಗೆ ತಕ್ಕಷ್ಟು ಉಪ್ಪು,
ಅರಶಿನ ಪುಡಿ,
ಮೆಣಸಿನ ಪುಡಿ,
ಒಗ್ಗರಣೆಗೆ ಬೇಕಾದ ಪದಾರ್ಥಗಳು.
ಮಾಡುವ ವಿಧಾನ:
ನೇರಳೆ ಬಣ್ಣದ ಬದನೆಯನ್ನು ಚೆನ್ನಾಗಿ ತೊಳೆದು ನಾಲ್ಕು ಭಾಗಗಳಾಗಿ ಸೀಳಿ.(ಬದನೆಕಾಯಿ ಹೋಳಾಗಿ ಪ್ರತ್ಯೇಕವಾಗಬಾರದು.) ಮಸಾಲೆ ಪುಡಿಗೆ ರುಚಿಗೆತಕ್ಕಷ್ಟು ಉಪ್ಪು, ಚಿಟಿಕೆ ಅರಶಿನ ಹುಡಿ, ಅರ್ಧ ಟೀ ಸ್ಪೂನ್ ಮೆಣಸಿನ ಹುಡಿಯನ್ನು ಸೇರಿಸಿ ಮಿಶ್ರಮಾಡಿಟ್ಟುಕೊಳ್ಳಿ. ಅದಕ್ಕೆ ಲಿಂಬೆ ರಸ ಸೇರಿಸಿ ಕಲಸಿಡಿ. ಈ ಕಲಸಿದ ಪದಾರ್ಥಗಳನ್ನು ಸೀಳುಮಾಡಿದ ಬದನೆಕಾಯಿಗೆ ತುಂಬಿಡಿ.
ಅಗಲವಾದ ಬಾಣಲೆಯನ್ನು ಒಲೆಯಮೇಲಿಟ್ಟು ಎಣ್ಣೆ ಸುರಿಯಿರಿ. ಎಣ್ಣೆ ಕಾದ ನಂತರ ಒಗ್ಗರಣೆ ಸಾಮಾಗ್ರಿಗಳಾದ ಸಾಸಿವೆ, ಉದ್ದಿನಬೇಳೆ,ಒಣಮೆಣಸು, ಕರಿಬೇವುಗಳನ್ನು ಹಾಕಿ.ಒಗ್ಗರಣೆ ಸಿಡಿದ ತಕ್ಷಣ ಮಸಾಲೆ ತುಂಬಿದ ಬದನೆಕಾಯಿಗಳನ್ನು ಬಾಣಲೆಗೆ ಹಾಕಿ ಎಣ್ಣೆಯಲ್ಲಿಯೇ ಬೇಯಿಸಿ. ಮೃದುವಾಗಿ ಬದನೆಕಾಯಿ ಬೆಂದ ನಂತರ ಒಲೆಯಿಂದ ಕೆಳಗಿಳಿಸಿ. ಈ ಎಣ್ಣೆಗಾಯಿ ಅಕ್ಕಿರೊಟ್ಟಿಯೊಂದಿಗೆ ತಿನ್ನಲು ಬಲುರುಚಿ.