ʻಖುಷಿʼಯಲ್ಲಿ ಸಮಂತಾ-ವಿಜಯ್‌ ದೇವರಕೊಂಡ, ಫ್ಯಾನ್ಸ್‌ ಏನಂದ್ರು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸದ್ಯ ವಿಜಯ್ ದೇವರಕೊಂಡ ಮತ್ತು ಸಮಂತಾ ಸರಣಿ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಇವರಿಬ್ಬರು ಸೇರಿ ಲವ್ ರೊಮ್ಯಾಂಟಿಕ್ ಎಂಟರ್ ಟೈನರ್ ಸಿನಿಮಾ ಮಾಡಲಿದ್ದಾರೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರ ಈಗಾಗಲೇ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈ ಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದ್ದು, ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಪ್ರಕಟಿಸಿದೆ.

ಪವರ್ ಸ್ಟಾರ್‌ ಪವನ್ ಕಲ್ಯಾಣ್ ವೃತ್ತಿ ಜೀವನದಲ್ಲಿ ಸೂಪರ್ ಹಿಟ್ ಸಿನಿಮಾ ‘ಖುಷಿ’. ಇದೀಗ ವಿಜಯ್ ದೇವರಕೊಂಡ ಮತ್ತು ಸಮಂತಾ ನಟನೆಯ ಚಿತ್ರಕ್ಕೆ ‘ಖುಷಿ’ ಎಂಬ ಶೀರ್ಷಿಕೆಯನ್ನು ಘೋಷಿಸಿದ್ದಾರೆ. ತೆಲುಗು, ಕನ್ನಡ ತಮಿಳು, ಮತ್ತು  ಮಲಯಾಳಂನಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ವರ್ಷ ಡಿಸೆಂಬರ್ 23 ರಂದು ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ದಿನಾಂಕ ಕೂಡ ಘೋಷಣೆ ಮಾಡಿದ್ದಾರೆ.

ವಿಜಯ್ ಮತ್ತು ಸಮಂತಾ ಅಭಿಮಾನಿಗಳು ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿರುವಾಗಲೇ ಪವನ್ ಕಲ್ಯಾಣ್ ಅಭಿಮಾನಿಗಳು ವಿಜಯ್ ಅವರಂತಹ ಮಾಸ್ ಹೀರೋ ಇಂತಹ ಕ್ಲಾಸಿಕ್ ಟೈಟಲ್ ಬಳಸದೇ ಇರುವುದೇ ಉತ್ತಮ ಎಂದಿದ್ದಾರೆ. ಆದರೆ ಸಿನಿಮಾದಲ್ಲಿ ವಿಜಯ್ ಮತ್ತು ಸಮಂತಾ ನಡುವೆ ಲವ್ ರೊಮ್ಯಾಂಟಿಕ್ ಡ್ರಾಮಾ ಕೂಡ ಇರಲಿದೆಯಂತೆ. ವಿಜಯ್ ಪವನ್ ಕಲ್ಯಾಣ್ ಸಿನಿಮಾ ಹೆಸರಿಟ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಈ ಸಿನಿಮಾದ ಮೂಲಕ ಪವನ್ ಕಲ್ಯಾಣ್ ಅಭಿಮಾನಿಗಳನ್ನು ಮೆಚ್ಚಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!