Sunday, June 4, 2023

Latest Posts

ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಪ್ರವೇಶಕ್ಕೆ ಇನ್ಮುಂದೆ ಫೀಸ್ ಕಡ್ಡಾಯ, ಕಸ ಸುರಿಯೋದನ್ನು ತಡೆಯೋದಕ್ಕೆ ಹೊಸ ಪ್ಲ್ಯಾನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದ್ವಾರದಿಂದ ಪ್ರವೇಶ ಪಡೆಯಲು ಬೇರೆ ರಾಜ್ಯದ ವಾಹನಗಳು ಶುಲ್ಕ ಪಾವತಿ ಮಾಡಬೇಕಿತ್ತು, ಆದರೆ ಇದೀಗ ಇತರ ಜಿಲ್ಲೆಯ ವಾಹನಗಳಿಗೂ ಶುಲ್ಕ ವಿಧಿಸಲಾಗುತ್ತಿದೆ.

ಅರಣ್ಯ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವುದು, ಉಗಿಯುವುದು, ಪರಿಸರ ಹಾಳು ಮಾಡುವುದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ.

ಅರಣ್ಯದ ಅಂಚಿನಲ್ಲಿ ಕಸ ಸುರಿಯುವುದನ್ನು ನಿಯಂತ್ರಿಸಲು ಗಟ್ಟಿ ನಿರ್ಣಯ ಅವಶ್ಯವಾಗಿತ್ತು. ಅರಣ್ಯದ ಅಂಚಿನಲ್ಲಿ ಕೇರಳದಿಂದ ತರುತ್ತಿದ್ದ ಅಪಾರ ಪ್ರಮಾಣದ ತ್ಯಾಜ್ಯ ವಸ್ತುಗಳನ್ನು ಕೊಡಗಿನ ಕಾಡುಗಳಲ್ಲಿ ಸುರಿಯುವುದಕ್ಕೆ ನಿಯಂತ್ರಣ ಹೇರಲು ಈ ರೀತಿ ಮಾಡಲಾಗಿದೆ. ಇದರಿಂದಾಗಿ ಕಸ ಸುರಿಯುವುದು ನಿಯಂತ್ರಣಕ್ಕೆ ಬಂದಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಮೂರ್ತಿ ಬಿಎನ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!