Thursday, February 2, 2023

Latest Posts

ಅಮೆರಿಕದ ಮೇಲೆ ʼಬಾಂಬ್‌ ಸೈಕ್ಲೋನ್‌ʼ ದಾಳಿ: ವಿದ್ಯುತ್‌, ನೀರು ಇಲ್ಲದೆ 24 ಕೋಟಿ ಜನರ ಪರದಾಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
“ಬಾಂಬ್ ಸೈಕ್ಲೋನ್” ಹೆಸರಿನ ಚಳಿಗಾಲದ ಚಂಡಮಾರುತವು ಅಮೆರಿಕವನ್ನು ಸುತ್ತುವರೆದಿದ್ದು, ದೇಶದಲ್ಲಿ ದೊಡ್ಡಮಟ್ಟದ ಹಾನಿ ಸೃಷ್ಟಿಸುತ್ತ ಮುನ್ನುಗ್ಗುತ್ತಿದೆ. ಹಲವೆಡೆ ಹೆದ್ದಾರಿ ನಾಶವಾಗಿದ್ದು, ಸಂಪರ್ಕ ಕಡಿತಗೊಂಡಿದೆ. ವಿಮಾನಯಾನಕ್ಕೆ ಅಡ್ಡಿಯುಂಟಾಗಿರುವುದರಿಂದ ಕ್ರಿಸ್‌ಮಸ್ ವೇಳೆ ಸಂಚರಿಸಲಾಗದೆ ಪ್ರಯಾಣಿಕರು ಪರದಾಡುತ್ತಿದ್ದಾರೆ. ಜೊತೆಗೆ ವಿದ್ಯುತ್‌ ವ್ಯವಸ್ಥೆ ಸ್ಥಗಿತಗೊಂಡಿರುವುದರಿಂದ ಮಿಲಿಯನ್‌ಗಿಂತಲೂ ಹೆಚ್ಚು ಜನರು ಕತ್ತಲೆಯಲ್ಲಿ ಪರಿತಪಿಸುತ್ತಿದ್ದಾರೆ.
ಅಮೆರಿಕದ 48 ರಾಜ್ಯಗಳ ಸುಮಾರು 24 ಕೋಟಿ ಜನರು ಅಂದರೆ ಒಟ್ಟು ಜನಸಂಖ್ಯೆಯ ಶೇ 70ರಷ್ಟು ಮಂದಿ ಇದೀಗ ಶೀತಗಾಳಿಯ ಹೊಡೆತಕ್ಕೆ ಸಿಲುಕಿದ್ದಾರೆ. ಕೆಲವೆಡೆ ಉಷ್ಣಾಂಶ ಪ್ರಮಾಣವು – 48 ಡಿಗ್ರಿ ಸೆಲ್ಷಿಯಸ್​ನಷ್ಟು ಕುಸಿದಿದೆ.
ಭಾರೀ ಹಿಮ, ಗಾಳಿಯ ಅಬ್ಬರ, ಕೊರೆಯುವ ಚಳಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಕುದಿಯುವ ನೀರನ್ನು ಸಹ ಮಂಜುಗಡ್ಡೆಯಾಗಿ ಪರಿವರ್ತಿಸುತ್ತಿದೆ. ರಾಷ್ಟ್ರೀಯ ಹವಾಮಾನ ಸೇವೆ (NWS) ಪ್ರಕಾರ ತಾಪಮಾನವು -55 ಫ್ಯಾರನ್‌ಹೀಟ್ (-48 ಸೆಲ್ಸಿಯಸ್) ಗಿಂತ ಕಡಿಮೆ ತಾಪಮಾನಕ್ಕೆ ದೇಶ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!