ನಟಿ ಎರಿಕಾ ಫರ್ನಾಂಡಿಸ್‌ಗೆ ಕೊರೋನಾ: ಮನೆಯಲ್ಲೇ ಟೆಸ್ಟ್ ಮಾಡಿಕೊಳ್ಳಬೇಡಿ ಎಂದ ನಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಎರಿಕಾ ಫರ್ನಾಂಡಿಸ್ ಹಾಗೂ ಅವರ ತಾಯಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಎರಿಕಾ ಮಾತನಾಡಿದ್ದು, ಮನೆಯಲ್ಲೇ ಕೋವಿಡ್ ಕಿಟ್‌ಗಳಲ್ಲಿ ಪರೀಕ್ಷೆ ಮಾಡಿಸಿ ಸುಮ್ಮನಾಗಬೇಡಿ. ಲ್ಯಾಬ್‌ಗೆ ಹೋಗಿ ಟೆಸ್ಟ್ ಮಾಡಿಸಿಕೊಳ್ಳಿ ಎಂದಿದ್ದಾರೆ.

ಸೌಮ್ಯ ಲಕ್ಷಣಗಳು ಕಂಡಾಗಲೇ ಮನೆಯಲ್ಲೇ ಕೋವಿಡ್ ಕಿಟ್‌ಗಳನ್ನು ತರಿಸಿ ಪರೀಕ್ಷೆ ಮಾಡಿಕೊಂಡೆವು. ಒಂದಲ್ಲಾ ಮೂರು ಬಾರಿ ಪರೀಕ್ಷೆ ಮಾಡಿಕೊಂಡಿದ್ದೇವೆ. ಮೂರೂ ನೆಗೆಟಿವ್ ಬಂದಿದೆ. ಆದರೆ ಲಕ್ಷಣಗಳು ಹೆಚ್ಚಾಗುತ್ತಾ ಹೋಯಿತು. ಅದಕ್ಕೆ ಬೇರೆಡೆ ಪರೀಕ್ಷೆ ಮಾಡಿಸಿದಾಗ ಇಬ್ಬರಿಗೂ ಸೋಂಕು ಇರುವುದು ದೃಢಪಟ್ಟಿದೆ.

ಶೀತ,ಜ್ವರ,ಗಂಟಲುನೋವು, ಚಳಿ ಜ್ವರ ಎಲ್ಲವೂ ಇದೆ. ಐಸೋಲೇಟ್ ಆಗಿದ್ದೇವೆ. ಎಲ್ಲರೂ ಆರೋಗ್ಯವಾಗಿ ಜಾಗರೂಕರಾಗಿರಿ ಎಂದಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!