ರಷ್ಯಾದ ತೈಲ ಆಮದನ್ನು ಸಂಪೂರ್ಣವಾಗಿ ನಿಲ್ಲಿಸುತ್ತೇವೆಂದ ಯುರೋಪಿಯನ್‌ ಒಕ್ಕೂಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
2022ರ ಅಂತ್ಯದ ವೇಳೆಗೆ ರಷ್ಯಾದಿಂದ ಸಂಪೂರ್ಣವಾಗಿ ತೈಲ ಆಮದನ್ನು ನಿಲ್ಲಿಸಲಾಗುತ್ತದೆ ಎಂದು ಯುರೋಪಿಯನ್‌ ಒಕ್ಕೂಟ ಹೇಳಿದೆ. ಈ ಕುರಿತು ಯುರೋಪಿಯನ್‌ ಕಮಿಷನ್‌ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ “ಯುರೋಪಿಯನ್ ಯೂನಿಯನ್ ರಷ್ಯಾದಿಂದ ಎಲ್ಲಾ ಕಚ್ಚಾ ಮತ್ತು ಸಂಸ್ಕರಿಸಿದ ತೈಲ ಆಮದುಗಳನ್ನು 2022 ರ ಅಂತ್ಯದ ವೇಳೆಗೆ ನಿಲ್ಲಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಯುರೋಪಿನ ಒಟ್ಟೂ ತೈಲದ ಪಾಲಿನಲ್ಲಿ 25% ರಷ್ಯಾದಿಂದ ಬರುತ್ತದೆ. ಅದರಲ್ಲೂ ಜರ್ಮನಿ ಮತ್ತು ಸ್ಲೊವಾಕಿಯಾ ದೇಶಗಳು ಹೆಚ್ಚು ರಷ್ಯಾ ತೈಲವನ್ನು ಬಳಸುತ್ತಿದ್ದು ಜರ್ಮನಿಯು 12% ತೈಲದ ಪಾಲು ರಷ್ಯಾದಿಂದ ಬರುತ್ತದೆ. ಸ್ಲೋವಾಕಿಯಾವು ಬಹುಪಾಲು ಅಂದರೆ 96% ದಷ್ಟು ರಷ್ಯಾ ತೈಲವನ್ನೇ ಬಳಸುತ್ತದೆ. ತೈಲ ರಪ್ತಿನಿಂದ ಅಲ್ಪಾವಧಿಯಲ್ಲಿ ರಷ್ಯಾವು ದಿನವೊಂದಕ್ಕೆ 285 ಮಿಲಿಯನ್ ಡಾಲರ್‌ ಗಳಷ್ಟು ಹಣ ಗಳಿಸುತ್ತದೆ.

ಯುರೋಪಿಯನ್‌ ಯೂನಿಯನ್‌ ಗಳ ಈ ನಿರ್ಬಂಧವು ರಷ್ಯಾಗೆ ಅನುಕೂಲವನ್ನೇ ಮಾಡಿಕೊಡಲಿದೆ. ಏಕೆಂದರೆ ತೈಲ ಬೆಲೆಯಲ್ಲಿನ ಹೆಚ್ಚಳದಿಂದ ಕಡಿಮೆ ಬ್ಯಾರಲ್ಲುಗಳು ಮಾರಾಟವಾಗುವುದರಿಂದ ರಷ್ಯಾಕ್ಕೆ ಇದರಿಂದ ಲಾಭವಾಗಲಿದೆ ಎಂದು ವರದಿಗಳು ಹೇಳಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!