ದಿನಭವಿಷ್ಯ | ಗುರುವಾರದ ಜಾತಕ ಫಲಗಳು ಹೀಗಿವೆ..

ಮೇಷ
ಇತರರೊಂದಿಗೆ ವಿಧೇಯತೆಯಿಂದ  ವರ್ತಿಸಿ. ಮುಖ್ಯವಾಗಿ ಕಚೇರಿಯಲ್ಲಿ ವಿನಯವಿರಲಿ. ಅದರಿಂದ ಮೆಚ್ಚುಗೆ ಗಳಿಸುವಿರಿ.

ವೃಷಭ
ವ್ಯಕ್ತಿಯೋರ್ವರ ಪ್ರಭಾವಕ್ಕೆ ಒಳಗಾಗು ವಿರಿ. ಅವರಿಂದ ಪ್ರೇರಿತರಾಗುವಿರಿ.ಕೌಟುಂಬಿಕ ಕಿರಿಕಿರಿ ಮನಸ್ಸಿನ ನೆಮ್ಮದಿ ಕದಡಬಹುದು

ಮಿಥುನ
ಹೊಸ ಕಾರ್ಯಕ್ಕೆ ಮನ ಮಾಡುವಿರಿ. ನಿಮ್ಮ ಕಾರ್ಯಕ್ಕೆ  ಹಿತೈಷಿಗಳ ಬೆಂಬಲ ದೊರಕಲಿದೆ. ಆದರೂ ಯಶಸ್ಸಿನ
ಬಗ್ಗೆ ಅತಿವಿಶ್ವಾಸ  ಬೇಡ.

ಕಟಕ
ನಿಮ್ಮ ಭಾವನಾತ್ಮಕ ಆವಶ್ಯಕತೆಗೆ ಆದ್ಯತೆ ಕೊಡಿ. ಇತರರು ನೋವು ನೀಡಬಹುದು.ಕಠಿಣ ನಿಲುವು ತಳೆಯಲು ಹಿಂಜರಿಕೆ ಬೇಡ.

ಸಿಂಹ
ಇತರರ ನೋವು ಅರಿತುಕೊಳ್ಳುವ ಸಹನೆಯಿರಲಿ.ಅವರ ಭಾವನೆಗೆ ಸ್ಪಂದಿಸಿ. ಇದರಿಂದ ನೀವು ಇತರರ ಆದರಕ್ಕೆ ಪಾತ್ರರಾಗುವಿರಿ.

ಕನ್ಯಾ
ನಿಮ್ಮ ದೈಹಿಕ ಆರೋಗ್ಯದತ್ತ ಗಮನ ನೀಡುವುದು ಮುಖ್ಯ.  ಅನಾರೋಗ್ಯ ಕಾಡುವ ಸಾಧ್ಯತೆ. ಆರ್ಥಿಕ ಒತ್ತಡ ಹೆಚ್ಚಳ, ಖರ್ಚೂ ಅಧಿಕ.

ತುಲಾ
ವೃತ್ತಿಪರ ಕನಸು ನನಸು. ಆದರೆ ಈ ವಿಷಯದಲ್ಲಿ ತುಸು ಸಹನೆ ಅವಶ್ಯ. ಯಾವುದಕ್ಕೂ ಆತುರ ತೋರದಿರಿ.ಕೌಟುಂಬಿಕ ಸಹಕಾರ. ಶಾಂತಿ

ವೃಶ್ಚಿಕ
ಬಿಡುವಿಲ್ಲದ ಕೆಲಸದಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಳಲುವಿರಿ. ಇದರ ಜತೆಗೇ ಕುಟುಂಬಸ್ಥರ ಅಸಹಕಾರವನ್ನೂ ಎದುರಿಸುವಿರಿ.

ಧನು
ಮನೆಯಲ್ಲಿ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿ ಭಿನ್ನಾಭಿಪ್ರಾಯ ಉಂಟಾದೀತು. ಅದನ್ನು ಸಹನೆಯಿಂದ ಪರಿಹರಿಸಿ.

ಮಕರ
ಆರ್ಥಿಕ ಪರಿಸ್ಥಿತಿ ಉತ್ತಮ. ಕೆಲವು ದಿನಗಳಿಂದ ಕಾಡುತ್ತಿದ್ದ ದೈಹಿಕ ನೋವು ನಿವಾರಣೆ. ಹಿತೈಷಿಗಳಿಂದ  ಶುಭಸುದ್ದಿಕೇಳುವಿರಿ.

ಕುಂಭ
ನಿಮ್ಮ ಮೆಚ್ಚಿನ ಹವ್ಯಾಸಕ್ಕೆ ಇಂದು ಹೆಚ್ಚಿನ ಗಮನ ನೀಡುವಿರಿ.ಅದರಿಂದ ಮನಸ್ಸಿಗೆ ಸಮಾಧಾನ.ಕೌಟುಂಬಿಕ, ಕಚೇರಿಯ ಸಮಸ್ಯೆಗಳಿಂದು ಗೌಣ.

ಮೀನ
ಸಂಬಂಧದಲ್ಲಿ ಭಿನ್ನಮತ ಶಮನ. ಉದ್ಯೋಗದಲ್ಲಿ  ಇತರರ ಹಸ್ತಕ್ಷೇಪ ದಿಂದ ಮನಸ್ಸಿಗೆ ಕಸಿವಿಸಿ. ಆರ್ಥಿಕ ಒತ್ತಡ ನಷ್ಟ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!