‘ಏಕವಚನದಲ್ಲಿ ಮಾತಾಡೋದನ್ನು ಕಾಂಗ್ರೆಸ್ ಕಾರ್ಯಕರ್ತರೂ ಒಪ್ಪೋದಿಲ್ಲ’

ಹೊಸದಿಗಂತ ವರದಿ ಶಿವಮೊಗ್ಗ :

ಪ್ರಧಾನಿ ಮೋದಿ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಏಕವಚನದಲ್ಲಿ ಹಾಗೂ ಅಶ್ಲೀಲ ಪದಗಳನ್ನು ಬಳಸಿ ಬೈದರೆ ರಾಜ್ಯದ ಜನತೆ ಇರಲಿ ಕಾಂಗ್ರೆಸ್ ಕಾರ್ಯಕರ್ತರು ಕೂಡ ಬೆಂಬಲಿಸುವುದಿಲ್ಲ. ಇದನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕಮಾರ್ ಅರ್ಥ ಮಾಡಿಕೊಳ್ಳಬೇಕಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯನವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಬೇಕು. ಸಿಎಂ ಅವರನ್ನು ನಾಯಿ ಮರಿಗೆ ಹೋಲಿಸುವ ಮೂಲಕ ಆ ಸ್ಥಾನಕ್ಕೆ ಅವಮಾನ ಮಾಡಿದ್ದಾರೆ. ತಮ್ಮ ಹೇಳಿಕೆಯಿಂದ ತಪ್ಪಾಗಿದೆ ಎಂದು ಹೇಳಬೇಕಿತ್ತು. ಆದರೆ ತಮ್ಮದು ಹಳ್ಳಿ ಭಾಷೆ ಎನ್ನುವ ಮೂಲಕ ಹಳ್ಳಿಯವರಿಗೂ ಅವಮಾನ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯಕೀಯ ತಂತ್ರಗಾರಿಗೆ ನಮಗೆ ಗೊತ್ತಿರಲಿಲ್ಲ. ಶಾಸಕರನ್ನು ಹೈಜಾಕ್ ಮಾಡಬೇಕೆಂಬುದನ್ನು ಕಲಿಸಿದ್ದು, ಜನತಾದಳ ಹಾಗೂ ಕಾಂಗ್ರೆಸ್. ಇದನ್ನು ಕುಮಾರಸ್ವಾಮಿ ತಿಳಿದುಕೊಂಡು ಆಪರೇಶನ್ ಕಮಲದ ಬಗ್ಗೆ ಮಾತನಾಡಬೇಕು. ಯಡಿಯೂರಪ್ಪ ಹಾಗೂ ವಸಂತ ಬಂಗೇರ ಇಬ್ಬರೇ ಬಿಜೆಪಿಯಿಂದ ಗೆದ್ದಾಗ ವಸಂತ ಬಂಗೇರ ಅವರನ್ನು ಹೈಜಾಕ್ ಮಾಡಲಾಗಿತ್ತು. ಆಗ ಎಲ್ಲವೂ ರುಚಿ, ಶುಚಿಯಾಗಿತ್ತು. ಈಗ ನಾವು ಹೈಜಾಕ್ ಮಾಡಿದರೆ ಸಹಿಸಲು ಆಗುವುದಿಲ್ಲ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್‌ನವರು ಸುಳ್ಳು ಅಂಕಿ ಅಂಶಗಳನ್ನು ನೀಡುತ್ತಾ ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ ಮಾಡುತ್ತಿದ್ದಾರೆ. ಆ ಪಕ್ಷ ನಿಜವಾಗಿಯೂ ಎಸ್ಸಿ, ಎಸ್ಟಿ ಯವರಿಗೆ ನೆರವು ನೀಡಿದ್ದರೆ ಮೀಸಲು ಸ್ಥಾನಗಳಲ್ಲಿ ಅವರೇ ಗೆಲ್ಲಬೇಕಿತ್ತಲ್ಲ ? ಹೆಚ್ಚು ಸ್ಥಾನ ಪಡೆಯುವ ಕಾಂಗ್ರೆಸ್ ಸಮೀಕ್ಷೆ ಯಾವಾಗಲೂ ಸತ್ಯವಾಗಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!