POSITIVE STORY| ಆದರ್ಶ ಯುವ ರೈತ: ಈತನ ಕಥೆ ಯುವಕರಿಗೆ ಸ್ಪೂರ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದ ದಿವಂಗತ ಉದ್ಯಾನ ರತ್ನ ದಿನೇಶ್ ಕುಮಾರ್ ಅವರ ಪುತ್ರ ಸೋನು ನಿಗಮ್ ಅವರು ರಾಷ್ಟ್ರೀಯ ಉದ್ಯಾನ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅವರ ತಂದೆ ದಿನೇಶ್ ಕುಮಾರ್ ಅವರಿಗೆ ಉದ್ಯಾನ ರತ್ನ ಪ್ರಶಸ್ತಿ ಮತ್ತು ರಾಷ್ಟ್ರಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಿನೇಶ್ ಕುಮಾರ್ ನಿಧನದ ನಂತರ, ಸೋನು ಕೂಡ ರೈತನಾಗಲು ನಿರ್ಧರಿಸಿ, ತಂದೆಯ ಕನಸುಗಳನ್ನು ನನಸಾಗಿಸಿದರು. ಮುಜಾಫರ್‌ಪುರ ಸಕ್ರಾದ ಮಚ್ಚಿ ನಿವಾಸಿ 21 ವರ್ಷದ ಯುವ ರೈತ ಸೋನು ನಿಗಮ್ ಸಾವಯವ ಕೃಷಿ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಇದೀಗ ಸೋನು 2023ರ ರಾಷ್ಟ್ರೀಯ ಉದ್ಯಾನ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಪಡೆಯುತ್ತಿರುವ ಏಕೈಕ ರೈತ ಸೋನು ಮಾತ್ರ.

ಸೋನು ಅವರ ತಂದೆ ದಿನೇಶ್ ಕುಮಾರ್ ಅವರಿಗೂ ರಾಷ್ಟ್ರೀಯ ಉದ್ಯಾನ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2019ರಲ್ಲಿ ವಿದ್ಯುತ್ ಸ್ಪರ್ಶದಿಂದ ದಿನೇಶ್ ಮೃತಪಟ್ಟಿದ್ದರು. ದಿನೇಶ್ ಅವರ ಅಕಾಲಿಕ ಮರಣವು ಅವರ ಕುಟುಂಬಕ್ಕರ ಬರಸಿಡಿಲು ಬಡಿದಂತಾಗಿತ್ತು. 17 ವರ್ಷದ ಸೋನು ತನ್ನ ಕುಟುಂಬಕ್ಕಾಗಿ ತನ್ನ ತಂದೆಯ ಮಾರ್ಗವನ್ನು ಅನುಸರಿಸಲು ನಿರ್ಧರಿಸಿದನು.

ತನ್ನ ತಂದೆಯ ಹೆಜ್ಜೆಗಳನ್ನು ಅನುಸರಿಸಿ, ಸೋನು ಸಾವಯವ ಮತ್ತು ವೈಜ್ಞಾನಿಕ ಕೃಷಿಯತ್ತ ಗಮನ ಹರಿಸಿದರು. ಕೃಷಿ ಇಲಾಖೆ ಅಧಿಕಾರಿಗಳ ನೆರವಿನಿಂದ ಸೋನು ಅವರಿಗೆ ಉತ್ತಮ ಸಲಹೆ, ಮಾರ್ಗದರ್ಶನ ಸಿಕ್ಕಿದೆ. ಹಾಗಾಗಿ ಕೃಷಿಯಲ್ಲಿ ಉತ್ತಮ ಫಲಿತಾಂಶ ಪಡೆದು ರಾಜ್ಯದಲ್ಲೇ ಎಲ್ಲರ ಬಾಯಲ್ಲಿ ಈತನ ಹೆಸರು ಕೇಳಿಬರುತ್ತಿದೆ.

ಸೋನು ಪ್ರಸ್ತುತ ಯುಪಿಯ ವಿಶ್ವವಿದ್ಯಾನಿಲಯದಿಂದ ಬಿಎಸ್‌ಸಿ, ಎಜಿ ಕೋರ್ಸ್‌ಗಳನ್ನು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಓದುತ್ತಲೇ ವೈಜ್ಞಾನಿಕ ಮತ್ತು ಸಾವಯವ ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ಅದಕ್ಕಾಗಿಯೇ ಅವರನ್ನು ರಾಷ್ಟ್ರೀಯ ಉದ್ಯಾನ ರತ್ನ ಪ್ರಶಸ್ತಿ 2023ಗೆ ಆಯ್ಕೆ ಮಾಡಲಾಗಿದೆ. ಮೇ 28ರಂದು ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!