ಹೊಸದಿಗಂತ ವಿಜಯಪುರ:
ನೂರು ಕಾನೂನು ಬೇಕಾದರೂ ಎಂ.ಬಿ. ಪಾಟೀಲ ಅವರು ಮಾಡಲಿ. ಯಾವ ಮಗನಿಗೂ ನಾನು ಅಂಜಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಗುಡುಗಿದರು.
ರಾಹುಲ್ ಗಾಂಧಿ ಜನ್ಮದ ಬಗ್ಗೆ ಶಾಸಕ ಯತ್ನಾಳ ಹೇಳಿಕೆಗೆ ಎಂ. ಬಿ. ಪಾಟೀಲ ಕಾನೂನು ಹೋರಾಟದ ಎಚ್ಚರಿಕೆ ವಿಚಾರಕ್ಕೆ ನಗರದಲ್ಲಿ ಭಾನುವಾರ ಸುದ್ದಿಗಾರರ ಎದುರು ಪ್ರತಿಕ್ರಿಯಿಸಿದ ಅವರು, ನಮ್ಮ ಪಾರ್ಟಿಯಲ್ಲಿ ಎಂಥಂತ ಮಹಾನಾಯಕರಿಗೆ ಅಂಜಿಲ್ಲ ಇವರೆಲ್ಲ ಯಾರು ಎಂದು ವ್ಯಂಗ್ಯವಾಡಿದರು.
ಎಂ.ಬಿ. ಪಾಟೀಲ ಅವರ ಹಿಂದೆ ಒಬ್ಬ ಸೂಫಿ ಸಂತ ಮಹಾನ್ ದಾರ್ಶನಿಕ ಇದ್ದಾನೆ. ಲಿಂಗಾಯತರು ಮುಸ್ಲಿಂಮರು ಒಂದು, ಅವರ ಆಚರಣೆಗಳು ಒಂದು ಎಂದು ಹೇಳುತ್ತಾರೆ. ಆದರೆ ಲಿಂಗಾಯತರು ದನದ ಮಾಂಸ ತಿನ್ನುತ್ತಾರಾ ? ಎಂದು ಕಿಡಿಕಾರಿದರು.
ಮುಸ್ಲಿಂಮರಿಗೆ, ಲಿಂಗಾಯತರಿಗೆ ಹೋಲಿಸತ್ತಾರೆ ಇವರು, ಅಲ್ಲೊಬ್ಬ ದಾರ್ಶನಿಕನೊಬ್ಬ ಇದ್ದಾನೆ. ಲಿಂಗಾಯತರು, ಮುಸ್ಲಿಂಮರು ಯಾವಾಗ ಒಂದು ಆಗಲು ಸಾಧ್ಯ ಎಂದರು.
ಲಿಂಗಾಯತರು, ವೀರಶೈವರು ಎಲ್ಲರೂ ಸನಾತನ ಹಿಂದು ಧರ್ಮದ ಭಾಗ ಎಂದರು.